ಬೋಕೋ ಹರಾಮ್ ನಿಂದ 2000 ಹೆಣ್ಣುಮಕ್ಕಳ ಅಪಹರಣ..!

ನೈಜಿರಿಯಾದ ಕುಖ್ಯಾತ ಉಗ್ರ ಸಂಘಟನೆ ಬೋಕೋ ಹರಾಮ್ ನ ಉಗ್ರರು 2000 ಮಂದಿ ಹೆಣ್ಣುಮಕ್ಕಳನ್ನು ಅಪಹರಿಸಿದ್ದಾರೆ ಎಂದು ಹೇಳಲಾಗುತ್ತಿದೆ....
ಬೋಕೋ ಹರಾಮ್ (ಸಂಗ್ರಹ ಚಿತ್ರ)
ಬೋಕೋ ಹರಾಮ್ (ಸಂಗ್ರಹ ಚಿತ್ರ)
Updated on

ಡಾಕರ್: ನೈಜಿರಿಯಾದ ಕುಖ್ಯಾತ ಉಗ್ರ ಸಂಘಟನೆ ಬೋಕೋ ಹರಾಮ್ ನ ಉಗ್ರರು 2000 ಮಂದಿ ಹೆಣ್ಣುಮಕ್ಕಳನ್ನು ಅಪಹರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

 ನೈಜಿರಿಯಾದಲ್ಲಿ ನಡೆದಿರುವ ಬೋಕೋಹರಾಮ್ ಉಗ್ರರ ಕೃತ್ಯಗಳಿಗೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಮಾನವಹಕ್ಕುಗಳ ಆಯೋಗದ ಸಂಘಟನೆಗಳು ಹಾಗೂ "ಅಮ್ನೆಸ್ಟಿ ಇಂಟರ್ ನ್ಯಾಷನಲ್" ಸುಮಾರು 90 ಪುಟಗಳ ವರದಿಯನ್ನು ತಯಾರು ಮಾಡಿದ್ದು,  ವರದಿಯನ್ವಯ ಕಳೆದ 2014ರ ಆರಂಭದಿಂದ ಇಲ್ಲಿಯವರೆಗೂ ಈ ಕುಖ್ಯಾತ ಉಗ್ರ ಸಂಘಟನೆಯ ಉಗ್ರರು ಸುಮಾರು 2000 ಕ್ಕೂ ಅಧಿಕ ಹೆಣ್ಣುಮಕ್ಕಳನ್ನು ಅಪಹರಣ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಹೀಗೆ ಉಗ್ರರಿಂದ ಅಪಹರಣಕ್ಕೊಳಗಾದ ಹೆಣ್ಣುಮಕ್ಕಳನ್ನು ಉಗ್ರರು ತಮ್ಮ ಕಾಮತೃಷೆ ತೀರಿಸಿಕೊಳ್ಳಲು ಲೈಂಗಿಕ ಗುಲಾಮರಾಗಿ ಮಾಡಿಕೊಂಡಿದ್ದಾರೆ. ಮತ್ತೆ ಕೆಲವರನ್ನು ಉಗ್ರರಿಗೆ ಅಡುಗೆ ತಯಾರಿಸುವ ಕಾರ್ಮಿಕರಾಗಿ, ಮಹಿಳಾ ಉಗ್ರಗಾಮಿಗಳಾಗಿ ಮತ್ತು ಆತ್ಮಹತ್ಯಾ ದಳಗಳಲ್ಲಿ ಹೆಣ್ಣುಮಕ್ಕಳನ್ನು ವಿಭಜಿಸಲಾಗಿದೆ. ಇನ್ನು ಸುಮಾರು ಹೆಣ್ಣುಮಕ್ಕಳು ಉಗ್ರರ ಕೃತ್ಯಕ್ಕೆ ಬೆಂಬಲ ನೀಡದೇ ಇದ್ದಿದ್ದರಿಂದ ಅವರನ್ನು ಅಮಾನುಷವಾಗಿ ಕೊಂದು ಹಾಕಿರುವ ಸ್ಫೋಟಕ ಮಾಹಿತಿ ಕೂಡ ಈಗ ಹೊರಬಿದ್ದಿದೆ. ಅಲ್ಲದೆ ವರದಿಯಲ್ಲಿ ಉಗ್ರರಿಂದ ಅಪಹರಣಕ್ಕೊಳಗಾಗಿ ಬಿಡುಗಡೆಯಾಗಿ ಬಂದವರ ಸಂದರ್ಶನಗಳು ಕೂಡ ಇದ್ದು, ಉಗ್ರರ ಜಾಗದಲ್ಲಿ ಹೆಣ್ಣುಮಕ್ಕಳು ಅನುಭವಿಸುತ್ತಿರುವ ಚಿತ್ರಹಿಂಸೆಗಳನ್ನು ಅವರು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಅಲ್ಲದೆ ಉಗ್ರರ ಲೈಂಗಿಕ ಹಿಂಸೆ ತಾಳಲಾರದೆ ಅದೆಷ್ಟೋ ಹೆಣ್ಣುಮಕ್ಕಳು ತಪ್ಪಿಸಿಕೊಂಡು ಹೋಗುವ ಬರದಲ್ಲಿ ಉಗ್ರರ ಗುಂಡೇಟಿಗೆ ಬಲಿಯಾಗಿದ್ದಾರೆ. ಪ್ರಾಣಕ್ಕೆ ಹೆದರಿ ಅಲ್ಲಿಯೇ ಉಳಿದವರು ಅಲ್ಲಿ ಜೀವಂತ ಶವಗಳಾಗಿ ಉಗ್ರರ ಲೈಂಗಿಕ ಗುಲಾಮರಾಗಿದ್ದಾರೆ ಎಂದು ಸಂದರ್ಶನದಲ್ಲಿ ಕೆಲ ಹೆಣ್ಣುಮಕ್ಕಳು ಹೇಳಿದ್ದಾರೆ. ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಬೋಕೋ ಹರಾಮ್ ಉಗ್ರ ಸಂಘಟನೆಯ ಮುಖಂಡ ಅಬೂಬಕ್ಕರ್ ಶೇಖು, ಅಪಹರಣಕ್ಕೊಳಗಾದ ಹೆಣ್ಣುಮಕ್ಕಳು ನಮ್ಮ ಸೇನಾನಿಗಳನ್ನು ಮದುವೆಯಾಗಿದ್ದಾರೆ ಎಂದು ಹೇಳಿದ್ದಾನೆ.

ಇನ್ನು 2014ರ ಸೆಪ್ಟೆಂಬರ್ ನಲ್ಲಿ ಅಪಹರಣಕ್ಕೊಳಗಾಗಿದ್ದ 19 ವರ್ಷದ ಯುವತಿ ಹೇಳಿರುವಂತೆ, ಆಕೆಯನ್ನು ಆಕೆಯ ಮದುವೆ ದಿನದಂದೇ ಉಗ್ರರು ಅಪಹರಿಸಿದ್ದರು. ನಂತರ ಆಕೆಗೆ ಬಾಂಬ್ ತರಬೇತಿ, ಶೂಟಿಂಗ್ ತರಬೇತಿ ಮತ್ತು ಹಳ್ಳಿಗಳ ಮೇಲೆ ಹೇಗೆ ದಾಳಿ ಮಾಡಬೇಕು ಎಂಬ ವಿಚಾರಗಳ ಕುರಿತು ಆಕೆಗೆ ತರಬೇತಿ ನೀಡಲಾಯಿತಂತೆ. ಆಕೆಯೇ ಹೇಳಿಕೊಂಡಿರುವಂತೆ ಉಗ್ರರ ವಶದಲ್ಲಿರುವ ವೇಳೆ ಆಕೆಯನ್ನು ಇಸ್ಲಾಂ ಗೆ ಮತಾಂತರ ಮಾಡಲು ಪ್ರಯತ್ನಿಸಲಾಯಿತು ಮತ್ತು ಆಕೆಯ ಮೇಲೆ ಸಾಕಷ್ಟು ಬಾರಿ ಸಾಮೂಹಿಕ ಅತ್ಯಾಚಾರ ಕೂಡ ನಡೆದಿತ್ತು ಎಂದು ಹೇಳಿಕೊಂಡಿದ್ದಾಳೆ.

ಇದಲ್ಲದೆ ಉಗ್ರ ಸಂಘಟನೆಯನ್ನು ಸೇರಿಲಿಚ್ಛಿಸದ ಸಾಕಷ್ಟು ಪುರುಷರನ್ನು ಅಮಾನುಷವಾಗಿ ಕೊಲ್ಲಲಾಯಿತು ಎಂದು ಆಕೆ ಹೇಳಿದ್ದಾಳೆ. ಒಟ್ಟಾರೆ ನೈಜಿರಿಯಾದಲ್ಲಿ ಬೋಕೋ ಹರಾಮ್ ಉಗ್ರರ ಉಪಟಳ ಮಿತಿ ಮೀರಿದ್ದು, ಅಂತಾರಾಷ್ಟ್ರೀಯ ಸಮುದಾಯ ಒಗ್ಗೂಡಿ ಕೆಲಸ ಮಾಡಿದರೆ ಮಾತ್ರ ಈ ಲೋಕ ವಿದ್ರೋಹಿ ಸಂಘಟನೆಯನ್ನು ಬುಡಸಹಿತ ಕಿತ್ತುಹಾಕಬಹುದಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com