
ನ್ಯೂಯಾರ್ಕ್: ಬ್ಯಾಂಕ್ ವಂಚನೆ ಆರೋಪ ದಲ್ಲಿ ಭಾರತೀಯ ಮೂಲದ ಪುರೋಹಿತರೊಬ್ಬರಿಗೆ ಅಮೆರಿಕ ಸರ್ಕಾರ 27 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ನ್ಯೂಯಾರ್ಕ್‍ನ ಜಾರ್ಜಿಯಾದಲ್ಲಿದ್ದ ಹಿಂದೂ ದೇವಸ್ಥಾನವೊಂದರಲ್ಲಿ ಪುರೋಹಿತರಾಗಿದ್ದ ಅಣ್ಣಾಮಲೈ(49)ಗೆ ಜೈಲು ಶಿಕ್ಷೆ ಘೋಷಿಸಿದೆ. ಇವರು ಸ್ವಾಮೀಜಿ ಸಿದ್ದಾರ್ ಎಂದು ಕೂಡ ಗುರುತಿಸಿಕೊಂಡಿದ್ದರು. ಕಳೆದ ಆಗಸ್ಟ್ ನಲ್ಲಿ ಬ್ಯಾಂಕ್ ಹಾಗೂ ತೆರಿಗೆ ವಂಚನೆ ಆರೋಪವನ್ನು ಅವರ ಮೇಲೆ ಹಾಕಲಾಗಿತ್ತು. ಹಿಂದೂ ಧಾರ್ಮಿಕ ಸಂಸ್ಥೆಯನ್ನು ಈತ ದುರುಪಯೋಗಪಡಿಸಿ ತನ್ನ ವೈಯಕ್ತಿಕ ಕಾರಣಕ್ಕೆ ಬಳಸಿದ್ದ ಎಂದು ಅಮೆರಿಕದ ಅಟಾರ್ನಿ ಜಾನ್ ಎ ಹಾರ್ನ್ ತಿಳಿಸಿದ್ದಾರೆ.
ಜಾರ್ಜಿಯಾ ದೇವಸ್ಥಾನಕ್ಕೆ ಬರುತ್ತಿದ್ದ ಹಿಂದೂ ಭಕ್ತರಿಂದ ಆತ ಧಾರ್ಮಿಕ ಸೇವೆಗಳಿಗೆ ಹಣ ಪಡೆಯುತ್ತಿದ್ದ ಎನ್ನಲಾಗಿದೆ.
Advertisement