
ಗುಜರಾತ್: ಗುಜರಾತ್ ನಲ್ಲಿರುವ ಹಳ್ಳಿಯ ಬಡ ಕುಟುಂಬದಲ್ಲಿ ಹುಟ್ಟಿದ ಈ ಮಕ್ಕಳು ಸ್ಥೂಲಕಾಯ ಖಾಯಿಲೆಯಿಂದ ಬಳಲುತ್ತಿದ್ದಾರೆ. ಮಕ್ಕಳ ಚಿಕಿತ್ಸೆ ಕೊಡಿಸಲು ಸಾಧ್ಯವಾಗದ ಈ ನಿಸ್ಸಾಹಕ ತಂದೆ ಇದೀಗ ಮಕ್ಕಳ ರೋಗ ಗುಣಪಡಿಸುವ ಸಲುವಾಗಿ ತನ್ನ ಕಿಡ್ನಿಯನ್ನೇ ಮಾರಲು ಮುಂದಾಗಿದ್ದಾರೆ.
ಗುಜರಾತ್ ಮೂಲದ ರಮೇಶ್ ಬಾಯಿ ಎಂಬುವವರು ದಿನಗೂಲಿ ಮಾಡಿಕೊಂಡು ಬದುಕು ಸಾಗಿಸುತ್ತಿರುವ ವ್ಯಕ್ತಿ. ರಮೇಶ್ ಬಾಯಿ ಅವರ ಪತ್ನಿ ಪ್ರಜ್ಞಾ ಬೆನ್. ಈ ಇಬ್ಬರು ದಂಪತಿಗಳಿಗೆ 4 ಮಕ್ಕಳಿದ್ದಾರೆ. ಮೊದಲನೇ ಮಗಳು ಭವಿತಾ. ಮೊದಲು ಹುಟ್ಟಿದ ಮಗು ಭವಿತಾಳಿಗೆ ಈ ರೀತಿಯ ಯಾವುದೇ ಸಮಸ್ಯೆ ಕಂಡುಬರದಿದ್ದರೂ ಹುಟ್ಟಿದಾಗ ತೂಕ ಕಡಿಮೆ ಇದ್ದಾಳೆ ಎಂದು ವೈದ್ಯರು ಹೇಳಿದ್ದರಂತೆ. ಇದೀಗ ಭವಿತಾ ಸಂಪೂರ್ಣವಾಗಿ ಆರೋಗ್ಯವಾಗಿದ್ದಾಳೆ.
ಈಕೆ ನಂತರ ಹುಟ್ಟಿದ ಯೋಗಿತಾ, ಅನಿಷಾ ಹಾಗೂ ಹರ್ಷ್ ಎಂಬ ಮೂರು ಮಕ್ಕಳಿಗೂ ಸ್ಥೂಲಕಾಯ ರೋಗ ಬಂದಿದೆ. ಹುಟ್ಟಿದ 1 ವರ್ಷದ ನಂತರ ಮಕ್ಕಳಿಗೆ ಇದ್ದಕ್ಕಿದ್ದಂತೆ ಈ ಖಾಯಿಲೆ ಬಂದಿದೆ.
5 ವರ್ಷದ ಯೋಗಿತಾ 48 ಕೆ.ಜಿ, 3 ವರ್ಷದ ಅನಿಷಾ 34 ಕೆ.ಜಿ ಹಾಗೂ 18 ತಿಂಗಳ ಹರ್ಷ್ 15 ಕೆ.ಜಿ ತೂಕ ಹೊಂದಿದ್ದಾರೆ. ಈ ಮೂವರು ಮಕ್ಕಳ ಆಹಾರಕ್ಕೆ ಪ್ರತಿ ತಿಂಗಳು 10 ಸಾವಿರ ರುಪಾಯಿಗಳು ಖರ್ಚು ಬರುತ್ತದೆ. ದಿನಗೂಲಿ ಮಾಡುವ ರಮೇಶ್ ಬಾಯಿಗೆ ಎಷ್ಟೇ ದುಡಿಯುತ್ತೇನೆ ಎಂದರೂ ತಿಂಗಳಿಗೆ 3000 ರುಪಾಯಿಗಳು ಬರುತ್ತದ್ದಂತೆ. ಹಾಗೋ ಹೀಗೋ ಅಲ್ಲಿ ಇಲ್ಲಿ ಕೆಲಸ ಮಾಡಿ ಸಹೋದರ ಹಾಗೂ ಗೆಳಯರೊಂದಿಗೆ ಹಣ ಪಡೆದು ಮಕ್ಕಳ ಆಹಾರಕ್ಕೆ ಹಣ ಹೊಂದಿಸುತ್ತಾರಂತೆ.
ಇಷ್ಟಕ್ಕೂ 5 ವರ್ಷವೂ ದಾಟದ ಈ ಮಕ್ಕಳು ಅಂತಹದ್ದು ಏನು ತಿನ್ನುತ್ತಾರೆ ಅಂತಿರಾ...ಇಲ್ಲಿದೆ ಈ ಮಕ್ಕಳ ಆಹಾರ ಪಟ್ಟಿ...
Advertisement