ಐಎನ್ಎಸ್ ವಿಶಾಖಪಟ್ಟಣಂ ಇಂದು ಲೋಕಾರ್ಪಣೆ

ಪರಮಾಣು, ಜೈವಿಕ ಹಾಗೂ ರಾಸಾಯನಿಕ ವಾತಾವರಣದಲ್ಲಿ ಕಾರ್ಯ ನಿರ್ವಹಿಸಬಲ್ಲ ಭಾರತದ ಅತಿದೊಡ್ಡ ಸಮರ ನೌಕೆ ಐಎನ್ಎಸ್ ವಿಶಾಖಪಟ್ಟಣಂ ಸೋಮವಾರ ಲೋಕಾರ್ಪಣೆಯಾಗಲಿದೆ...
ಐಎನ್ ಎಸ್ ವಿಶಾಖಪಟ್ಟಣಂ
ಐಎನ್ ಎಸ್ ವಿಶಾಖಪಟ್ಟಣಂ

ಮುಂಬೈ: ಪರಮಾಣು, ಜೈವಿಕ ಹಾಗೂ ರಾಸಾಯನಿಕ ವಾತಾವರಣದಲ್ಲಿ ಕಾರ್ಯ ನಿರ್ವಹಿಸಬಲ್ಲ ಭಾರತದ ಅತಿದೊಡ್ಡ ಸಮರ ನೌಕೆ ಐಎನ್ಎಸ್ ವಿಶಾಖಪಟ್ಟಣಂ ಸೋಮವಾರ ಲೋಕಾರ್ಪಣೆಯಾಗಲಿದೆ.

ಭಾರತದ ಅತಿದೊಡ್ಡ ಸಮರ ನೌಕೆ ಎಂದೇ ಬಿಂಬಿಸಲಾಗುತ್ತಿರುವ ಐಎನ್ಎಸ್ ವಿಶಾಖಪಟ್ಟಣಂ ಸಮರ ನೌಕೆಯನ್ನು ಇಂದು ಲೋಕಾರ್ಪಣೆ ಮಾಡಲಾಗುವುದು. ಸುಮಾರು 29.600 ಕೋಟಿ ವೆಚ್ಚದಲ್ಲಿ ಈ ಬೃಹತ್ ಸಮರನೌಕೆಯನ್ನು ನಿರ್ಮಿಸಲಾಗಿದ್ದು, ಪ್ರಸ್ತುತ ಭಾರತದಲ್ಲಿರುವ ಸಮರ ನೌಕೆಗಳಲ್ಲೇ ಇದು ಅತಿ ದೊಡ್ಡ ಸಮರ ನೌಕೆ ಎಂದು ಹೇಳಲಾಗುತ್ತಿದೆ. ಸುಮಾರು 7,300 ಟನ್ ತೂಕವಿರುವ ಐಎನ್ಎಸ್ ವಿಶಾಖಪಟ್ಟಣ ಸಮರ ನೌಕೆಯನ್ನು ಮುಂಬೈನ ಡಾಕ್ ಯಾರ್ಡ್ ನಲ್ಲಿ ತಯಾರಿಸಲಾಗಿದೆ.

ಈ ಸಮರ ನೌಕೆ ಅತ್ಯಾಧುನಿಕ ಯುದ್ಧೋಪಕರಣಗಳನ್ನು ಹೊಂದಿದ್ದು, ಅತಿದೊಡ್ಡ ಗನ್ ವ್ಯವಸ್ಥೆಯನ್ನು ಹೊಂದಿದೆ. ಈ ಹಿಂದೆ ಐಎನ್ ಎಸ್ ಕೋಲ್ಕತಾ ಬಳಿ ಇದ್ದ 76 ಎಂಎಂ ಮೇನ್ ಗನ್ ದೊಡ್ಡ ಗನ್ ಆಗಿತ್ತು. ಇದೀಗ ಐಎನ್ ಎಸ್ ವಿಶಾಖಪಟ್ಟಣ ಸಮರ ನೌಕೆಗೆ 127 ಎಂಎಂನ ದೊಡ್ಡ ಗನ್ ವ್ಯವಸ್ಥೆ (Super Rapid Gun Mount) (SRGM)ಯನ್ನು ಅಳವಡಿಸಲಾಗಿದ್ದು, ಇದು ಈ ವರೆಗಿನ ಭಾರತದ ಅತಿದೊಡ್ಡ ಗನ್ ವ್ಯವಸ್ಥೆಯಾಗಿದೆ. ಇದಲ್ಲದೆ ಈ ಸಮರ ನೌಕೆಗೆ ಇಸ್ರೇಲಿ ಬಹುವಿಧ ಸರ್ವೇಕ್ಷಣಾ ಮತ್ತು ಅಪಾಯ ಎಚ್ಚರಿಕೆ ವ್ಯವಸ್ಥೆ ಇರುವ ರಾಡಾರ್ (Israeli Multi Function Surveillance Threat Alert Radar (MF-STAR) ಅನ್ನು ಅಳವಡಿಸಲಾಗಿದ್ದು, ಅತಿ ದೂರದಲ್ಲಿ ಬರುತ್ತಿರುವ ಶತ್ರುಪಾಳಯದ ಕ್ಷಿಪಣಿಗಳನ್ನು ಗುರುತಿಸಿ ಆಗಸದಲ್ಲಿಯೇ ಉಡಾಯಿಸುವ ಸಾಮರ್ಥ್ಯವನ್ನು ಹೊಂದಿದೆ.

16 ಬ್ರಹ್ಮೋಸ್ ಬಹುದೂರಗಾಮಿ ಕ್ಷಿಪಣಿಗಳನ್ನು ಸಿಡಿಸಬಲ್ಲ ಸಾಮರ್ಥ್ಯವನ್ನು ಈ ಐಎನ್ಎಸ್ ವಿಶಾಖಪಟ್ಟಣಂ ಹೊಂದಿದ್ದು, ಅತ್ಯಾಧುನಿಕ ಎಕೆ 630 ಕ್ಷಿಪಣಿ ನಿರೋಧಕ ಗನ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ.  ಇಂದು ಈ ಸಮರ ನೌಕೆ ಬಿಡುಗಡೆಯಾಗುತ್ತಿದ್ದು, 2018 ಜುಲೈ ನಲ್ಲಿ ನೌಕಾಪಡೆಗೆ ಅಧಿಕೃತವಾಗಿ ಸೇರ್ಪಡೆಯಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com