ನೇತಾಜಿ ಸಾವು ತನಿಖೆ ಹಳಿ ತಪ್ಪಿಸಿದ ಚರಣ್, ಮೊರಾರ್ಜಿ

ನೇತಾಜಿ ಸುಭಾಷ್‍ಚಂದ್ರ ಬೋಸ್ ನಿಗೂಢ ಸಾವಿನ ಪ್ರಕರಣವನ್ನು ಮೊರಾರ್ಜಿ ದೇಸಾಯಿ ಮತ್ತು ಚರಣ್‍ಸಿಂಗ್ ಇಬ್ಬರೂ ಸೇರಿ ಹಳಿತಪ್ಪಿಸಿದರು ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ...
ನೇತಾಜಿ ಸುಭಾಷ್‍ಚಂದ್ರ ಬೋಸ್
ನೇತಾಜಿ ಸುಭಾಷ್‍ಚಂದ್ರ ಬೋಸ್

ನವದೆಹಲಿ: ನೇತಾಜಿ ಸುಭಾಷ್‍ಚಂದ್ರ ಬೋಸ್ ನಿಗೂಢ ಸಾವಿನ ಪ್ರಕರಣವನ್ನು ಮೊರಾರ್ಜಿ ದೇಸಾಯಿ ಮತ್ತು ಚರಣ್‍ಸಿಂಗ್ ಇಬ್ಬರೂ ಸೇರಿ ಹಳಿತಪ್ಪಿಸಿದರು ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.

ಅಂದಿನ ಪ್ರಧಾನಿ ಇಂದಿರಾಗಾಂಧಿ ಮತ್ತು ಮೊರಾರ್ಜಿ ದೇಸಾಯಿ ನಡುವೆ ಯಾವ ವಿಷಯದಲ್ಲೂ ಸಹಮತ ಇರದಿದ್ದರೂ, ನೇತಾಜಿ ಸಾವಿನ ಪ್ರಕರಣದಲ್ಲಿ ಮಾತ್ರ ಇಬ್ಬರೂ ಒಂದೇ ನಿರ್ಧಾರವನ್ನು ಒಪ್ಪಿಕೊಂಡಿದ್ದರು. ಅಂದಿನ ಪ್ರಧಾನಿ ಮೊರಾರ್ಜಿ ಹಾಗೂ ಗೃಹ ಸಚಿವ ಚೌಧರಿ ಚರಣ್‍ಸಿಂಗ್ ನೇತಾಜಿ ಸಾವಿನ ಬಗ್ಗೆ ಮಹತ್ವದ ಸಾಕ್ಷ್ಯಗಳು ಸಿಕ್ಕಾಗಲೂ, ಇಡೀ ದೇಶ ತನಿಖೆಗೆ ಒತ್ತಾಯಿಸಿದರೂ ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿ ಪ್ರಕರಣಕ್ಕೆ ಎಳ್ಳುನೀರು ಬಿಟ್ಟರು ಎನ್ನಲಾಗಿದೆ.

ಇಂದಿರಾ ನೇಮಿಸಿದ್ದ ಖೋಸ್ಲಾ ಆಯೋಗದ ವರದಿ ಇದೊಂದು ವಿಮಾನ ಅಪಘಾತದಲ್ಲಾದ ಸಾವು ಎಂದು ಹೇಳಿ ಮುಗಿಸಿಬಿಟ್ಟಿತ್ತು. ಚರಣ್ ಹಾಗೂ ದೇಸಾಯಿ ಸರ್ಕಾರವು ಇಂದಿರಾ ಸರ್ಕಾರಾವಧಿಯ ವರದಿಯನ್ನು ಒಪ್ಪಿಕೊಂಡಿಲ್ಲ ಎಂದೇ ಜನ 38 ವರ್ಷಗಳಿಂದ ನಂಬಿಕೊಂಡು ಬಂದಿದ್ದರು. ಆದರೆ, ಸತ್ಯ ಏನೆಂದರೆ ಜನತಾ ಸರ್ಕಾರವು ಬೋಸ್ ಸಾವಿನ ತನಿಖೆ ಸಮಯದ ವ್ಯಯ ಹಾಗೂ ಸಂಪನ್ಮೂಲಗಳ ಸುಖಾಸುಮ್ಮನೆ ವೆಚ್ಚ ಎಂದೇ ಭಾವಿಸಿತ್ತು. ಇತ್ತೀಚೆಗೆ ಸಾರ್ವಜನಿಕಗೊಂಡ ಬೋಸ್‍ಗೆ ಸೇರಿದ ಫೈಲ್‍ವೊಂದು ಚರಣ್ ಸಿಂಗ್ ಸರ್ಕಾರದ ಕಳ್ಳಾಟವನ್ನು ಬಹಿರಂಗಪಡಿಸಿದೆ.

ಬೋಸ್ ನಾಪತ್ತೆ ಪ್ರಕರಣವನ್ನು ಹೊಸದಾಗಿ ತನಿಖೆ ಮಾಡಲು ಎಲ್ಲ ಸಂಸದರ ಬೆಂಬಲ ಇದ್ದರೂ ಜನತಾ ಸರ್ಕಾರ ಅದಕ್ಕೆ ಅಡ್ಡಿಮಾಡಿತ್ತು.ಸ್ವತಃ ದೇಸಾಯಿ ಅವರೇ ಹೊಸದಾಗಿ ತನಿಖೆ ನಡೆಸಲು ಆಸಕ್ತಿ ಹೊಂದಿರಲಿಲ್ಲ ಎನ್ನುವುದು ಆಗಿನ ಆಂತರಿಕ ಭದ್ರತೆ ವಿಭಾಗದ ಉಪ ನಿರ್ದೇಶಕ ಎನ್.ಕೆ. ಸಿನ್ಹಾ ಮತ್ತು ಜಂಟಿ ಕಾರ್ಯದರ್ಶಿ ಆರ್. ಎಲ್. ಮಿಶ್ರಾ ನಡುವಿನ ಟಿಪ್ಪಣಿಯೇ ಸಾಕ್ಷಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com