
ನವದೆಹಲಿ: ರಾಷ್ಟ್ರೀಯ ನ್ಯಾಯಾಂಗ ನೇಮಕ ಆಯೋಗ(ಎನ್‍ಜೆಎಸಿ)ದ ಸಾಂವಿಧಾನಿಕ ಮಾನ್ಯತೆ ನಿರ್ಧಾರವಾಗದೆ, ಉನ್ನತ ನ್ಯಾಯಾಂಗಕ್ಕೆ ಹೊಸ ನೇಮಕ ಮಾಡುವುದಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಸ್ಪಷ್ಟಪಡಿಸಿದೆ.
ಎನ್‍ಜೆಎಸಿ ಮಾನ್ಯತೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿ ಇತ್ಯರ್ಥವಾಗಿಲ್ಲ. ಅದು ಇತ್ಯರ್ಥವಾಗುವವರೆಗೂ, ಎನ್‍ಜೆಎಸಿ ಸದ್ಯ ಹೈಕೋರ್ಟ್‍ಗಳ ಹೆಚ್ಚುವರಿ ನ್ಯಾಯಾಧೀಶರ ನೇಮಕದ ಕೆಲಸ ಮಾತ್ರ ಮಾಡಲಿದೆ ಎಂದೂ ತಿಳಿಸಿದೆ.
Advertisement