ಪಪ್ಪು ಯಾದವ್ ಗೆ ಜಾಮೀನು: ನ್ಯಾಯಾಲಯ ಮೆಟ್ಟಿಲೇರಿದ ಬಿಹಾರ ಪೊಲೀಸರು

ಪದೇ ಪದೇ ಅಶಾಂತಿ ಸೃಷ್ಟಿಸುತ್ತಿರುವ ಲೋಕಸಭಾ ಮಾಜಿ ಸಂಸದ ರಾಜೇಶ್ ರಂಜನ್ ಅಲಿಯಾಸ್ ಪಪ್ಪು ಯಾದವ್ ಅವರ ಜಾಮೀನು ರದ್ದು ಮಾಡುವಂತೆ ಕೋರಿ ನ್ಯಾಯಾಲಯ ಮೊರೆ ಹೋಗಲಾಗುವುದು ಎಂಬು ಬಿಹಾರ ಪೊಲೀಸರು ಸೋಮವಾರ...
ರಾಜೇಶ್ ರಂಜನ್ ಅಲಿಯಾಸ್ ಪಪ್ಪು ಯಾದವ್ (ಸಂಗ್ರಹ ಚಿತ್ರ)
ರಾಜೇಶ್ ರಂಜನ್ ಅಲಿಯಾಸ್ ಪಪ್ಪು ಯಾದವ್ (ಸಂಗ್ರಹ ಚಿತ್ರ)

ಪಾಟ್ನ: ಪದೇ ಪದೇ ಅಶಾಂತಿ ಸೃಷ್ಟಿಸುತ್ತಿರುವ ಲೋಕಸಭಾ ಮಾಜಿ ಸಂಸದ ರಾಜೇಶ್ ರಂಜನ್ ಅಲಿಯಾಸ್ ಪಪ್ಪು ಯಾದವ್ ಅವರ ಜಾಮೀನು ರದ್ದು ಮಾಡುವಂತೆ ಕೋರಿ ನ್ಯಾಯಾಲಯ ಮೊರೆ ಹೋಗಲಾಗುವುದು ಎಂಬು ಬಿಹಾರ ಪೊಲೀಸರು ಸೋಮವಾರ ಹೇಳಿದ್ದಾರೆ.

ಅಜಿತ್ ಸರ್ಕಾರ್ ಕೊಲೆ ಪ್ರಕರಣ ಸಂಬಂಧ ಪಪ್ಪು ಯಾದವ್ ಅವರಿಗೆ ಪಾಟ್ನಾ ಹೈ ಕೋರ್ಟ್ ಜಾಮೀನು ನೀಡಿತ್ತು. ನ್ಯಾಯಾಲಯ ಜಾಮೀನು ನೀಡಿದ ನಂತರವೂ ಪಪ್ಪು ಯಾದವ್ ಅವರು ನಿಯಮಗಳನ್ನು ಉಲ್ಲಂಘಿಸುತ್ತಿದ್ದು, ಸಮಸ್ಯೆಗಳು ಉದ್ಭವವಾಗುವಂತೆ ಮಾಡುತ್ತಿದ್ದಾರೆ. ಹೀಗಾಗಿ ಪ್ರತಿನಿತ್ಯ ಅವರನ್ನು ಹಿಂಬಾಲಿಸುವುದು ಕಷ್ಟಕರವಾಗಿದೆ. ಹೀಗಾಗಿ ಪಪ್ಪು ಯಾದವ್ ನೀಡಿದ ಜಾಮೀನು ರದ್ದು ಕೋರಿ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ಹೇಳಿದ್ದಾರೆ.

ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಪಪ್ಪು ಯಾದವ್ ಗೆ ಜಾಮೀನು ನೀಡದಂತೆ 2007ರಲ್ಲೇ ಸುಪ್ರೀಂ ಕೋರ್ಟ್ ಸ್ಪಷ್ಟ ಆದೇಶ ನೀಡಿತ್ತು, ಆದರೆ, ಸುಪ್ರೀಂ ಆದೇಶದ ನಂತರವೂ 2009ರ ಫೆ.18ರಂದು ಪಾಟ್ನಾ ಹೈ ಕೋರ್ಟ್ ಪಪ್ಪುಗೆ ಜಾಮೀನು ನೀಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com