ಮುಂಗಾರು ಮಳೆ ಅಬ್ಬರ: ಉತ್ತರ ಭಾರತದಲ್ಲಿ 120 ಮಂದಿ ಸಾವು

ಮುಂಗಾರು ಮಳೆಯ ಅಬ್ಬರಕ್ಕೆ ಭಾರತ ಅಕ್ಷರಸಹ ತತ್ತರಿಸಿದೆ. ಉತ್ತರ ಹಾಗೂ ಈಶಾನ್ಯ ಭಾರತದ 5 ರಾಜ್ಯಗಳಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು
ಮುಂಗಾರು ಮಳೆ ಅಬ್ಬರ
ಮುಂಗಾರು ಮಳೆ ಅಬ್ಬರ

ನವದೆಹಲಿ: ಮುಂಗಾರು ಮಳೆಯ ಅಬ್ಬರಕ್ಕೆ ಭಾರತ ಅಕ್ಷರಸಹ ತತ್ತರಿಸಿದೆ. ಉತ್ತರ ಹಾಗೂ ಈಶಾನ್ಯ ಭಾರತದ 5 ರಾಜ್ಯಗಳಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು ಕನಿಷ್ಠ 120 ಮಂದಿ ಮೃತಪಟ್ಟಿದ್ದು, ಪ್ರವಾಹದಿಂದಾಗಿ 80 ಲಕ್ಷಕ್ಕೂ ಹೆಚ್ಚು ಜನರು ತೊಂದರೆಗೆ ಸಿಲುಕಿದ್ದಾರೆ.

ಕಳೆದ ಕೆಲವು ದಿನಗಳಿಂದ ಬಂಗಾಳ ಕೊಲ್ಲಿಯಲ್ಲಿ ಬೀಸುತ್ತಿರುವ ಕೊಮೆನ್‌ ಚಂಡಮಾರುತದ ಪ್ರಭಾವದಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ  ಪಶ್ಚಿಮ ಬಂಗಾಳ, ಗುಜರಾತ್‌, ರಾಜಸ್ತಾನ, ಮಣಿಪುರ ಮತ್ತು ಒಡಿಶಾ ರಾಜ್ಯಗಳು ತತ್ತರಿಸಿವೆ.

ಈ ಎಲ್ಲಾ ರಾಜ್ಯಗಳಲ್ಲಿ ಬಹುತೇಕ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಪ್ರವಾಹದಿಂದ  ಲಕ್ಷಾಂತರ ಜನರು ಮನೆ, ಮಠ ಕಳೆದುಕೊಂಡು ನಿರ್ಗತಿಕರಾಗಿದ್ದಾರೆ.  ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ 17 ತಂಡಗಳು ಸಾವಿರಾರು ಜನರನ್ನು ರಕ್ಷಿಸಿ ಸುರಕ್ಷಿತ  ಪ್ರದೇಶಗಳಿಗೆ ಸ್ಥಳಾಂತರಿಸಿದ್ದಾರೆ.

ಪ್ರವಾಹದಲ್ಲಿ ಸಿಲುಕಿರುವ ಸಂತ್ರಸ್ತರಿಗೆ ಹತ್ತು ಲಕ್ಷಕ್ಕೂ ಹೆಚ್ಚು ಆಹಾರ ಪೊಟ್ಟಣಗಳನ್ನು ಹೆಲಿಕಾಪ್ಟರ್‌ ಮೂಲಕ ವಿತರಿಸಲಾಗಿದೆ. ನಿರಾಶ್ರಿತರಿಗೆ ತಾತ್ಕಾಲಿಕ ಶಿಬಿರ ತೆರೆಯಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com