
ನವದೆಹಲಿ: ದೇಶಾದ್ಯಂತ 2014 ರಲ್ಲಿ ಪತ್ರಕರ್ತ ಮೇಲೆ ಸುಮಾರು 113 ಹಲ್ಲೆ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನ ಪಡೆದಿದೆ. 2014 ರಲ್ಲಿ ಸುಮಾರು 63 ಪತ್ರಕರ್ತರ ಮೇಲೆ ಹಲ್ಲೆ ನಡೆದಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಗೃಹಖಾತೆಯ ರಾಜ್ಯ ಸಚಿವ ಹರಿಬಾಯಿ ಪಾರ್ತಿಬಾಯಿ ಚೌದರಿ ಈ ಸಂಬಂಧ ಸಂಸತ್ತಿನಲ್ಲಿ ಲಿಖಿತ ಹೇಳಿಕೆ ನೀಡಿದ್ದಾರೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆಯ ಅಂಕಿ ಅಂಶಗಳ ಮಾಹಿತಿ ನೀಡಿದ ಅವರು, ಪತ್ರಕರ್ತರ ಮೇಲೆ ಅತಿ ಹೆದ್ದು ದಾಳಿ ನಡೆದಿರುವುದು ಉತ್ತರ ಪ್ರದೇಶದಲ್ಲಿ ಎಂಬುದನ್ನು ತಿಳಿಸಿದ್ದಾರೆ.
ಇದು ಹಲ್ಲೆ ನಡೆದಿರುವ ಬಗ್ಗೆ ಮಾಹಿತಿಯಷ್ಟೆ. ಕೊಲೆಯಾಗಿರುವ ಅಂಕಿ ಅಂಶಗಳೇ ಬೇರೆ ಇದೆ. ಇನ್ನು 113 ಹಲ್ಲೆ ಪ್ರಕರಣ ಸಂಬಂಧ ಇದುವರೆಗೆ 30 ಮಂದಿಯನ್ನು ಬಂಧಿಸಲಾಗಿದೆ. ಇನ್ನು ಮಧ್ಯ ಪ್ರದೇಶದಲ್ಲೂ 10 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ವಿವರ ನೀಡಿದರು.
Advertisement