ಅಶ್ಲೀಲ ವೆಬ್ ಸೈಟ್ ಗಳಿಗೆ ಮಾತ್ರ ನಿರ್ಬಂಧ : ರವಿಶಂಕರ್ ಪ್ರಸಾದ್ ಸ್ಪಷ್ಟನೆ

857 ಅಶ್ಲೀಲ ವೆಬ್ ಸೈಟ್ ಗಳಿಗೆ ಕೇಂದ್ರ ಸರ್ಕಾರ ನಿರ್ಬಂಧ ಹೇರಿರುವುದಕ್ಕೆ ದೇಶದಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಇದೀಗ ಸರ್ಕಾರ ತನ್ನ ನಿರ್ಬಂಧ ಕುರಿತಂತೆ ಸ್ಪಷ್ಟನೆ ನೀಡಿದ್ದು, ಅಶ್ಲೀಲ ವೆಬ್ ಸೈಟ್ ಗಳ ಕುರಿತಂತೆ ಅಂತಿಮ ಆದೇಶ ಹೊರಬೀಳುವವರೆಗೂ...
ಅಶ್ಲೀಲ ವೆಬ್ ಸೈಟ್ ಗೆ ನಿರ್ಬಂಧ ತಾತ್ಕಾಲಿಕ ಕ್ರಮವಷ್ಟೇ: ರವಿಶಂಕರ್ ಪ್ರಸಾದ್ (ಸಾಂದರ್ಭಿಕ ಚಿತ್ರ)
ಅಶ್ಲೀಲ ವೆಬ್ ಸೈಟ್ ಗೆ ನಿರ್ಬಂಧ ತಾತ್ಕಾಲಿಕ ಕ್ರಮವಷ್ಟೇ: ರವಿಶಂಕರ್ ಪ್ರಸಾದ್ (ಸಾಂದರ್ಭಿಕ ಚಿತ್ರ)

ನವದೆಹಲಿ: 857 ಅಶ್ಲೀಲ ವೆಬ್ ಸೈಟ್ ಗಳಿಗೆ ಕೇಂದ್ರ ಸರ್ಕಾರ ನಿರ್ಬಂಧ ಹೇರಿರುವುದರ ಕುರಿತಂತೆ ದೇಶದಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಇದೀಗ ಸರ್ಕಾರ ತನ್ನ ನಿರ್ಬಂಧ ಕುರಿತಂತೆ ಸ್ಪಷ್ಟನೆ ನೀಡಿದ್ದು, ಅಶ್ಲೀಲ ವೆಬ್ ಸೈಟ್ ಗಳ ಕುರಿತಂತೆ ಅಂತಿಮ ಆದೇಶ ಹೊರಬೀಳುವವರೆಗೂ  ಸರ್ಕಾರ ತಾತ್ಕಾಲಿಕ ಕ್ರಮವನ್ನು ಕೈಗೊಂಡಿದೆ ಎಂದು ಹೇಳಿದೆ.

ಅಶ್ಲೀಲ ವೆಬ್ ಸೈಟ್ ಗಳೆಂದು ಈಗಾಗಲೇ ನಿರ್ಬಂಧ ಹೇರಿರುವ 857 ವೆಬ್ ಸೈಟ್ ಗಳ ಪಟ್ಟಿಯಲ್ಲಿ ಕೆಲವು ವೆಬ್ ಸೈಟ್ ಗಳಲ್ಲಿ  ಜೋಕ್ಸ್ ಮಾನವಾಸಕ್ತಿ ವಿಷಯಗಳು, ಹಾಸ್ಯಗಳನ್ನು ಹಾಕುವಂತಹ ವೆಬ್ ಸೈಟ್ ಗಳಾಗಿದ್ದು, ಇಂತಹ ಸೈಟ್ ಗಳಿಗೂ ಸರ್ಕಾರ ನಿರ್ಬಂಧ ಹೇರಿರುವ ಕುರಿತಂತೆ ದೇಶದಾದ್ಯಂತ ವಿರೋಧಗಳು ವ್ಯಕ್ತವಾಗಿತ್ತು.

ಹೀಗಾಗಿ ವಿವಾದ ಕುರಿತಂತೆ ಇಂದು ಉನ್ನತ ಮಟ್ಟದ ಸಭೆ ನಡೆಸಿರುವ ಟೆಲಿಕಾಂ ಸಚಿವ ರವಿ ಶಂಕರ್ ಪ್ರಸಾದ್ ಅವರು ಸಭೆಯಲ್ಲಿ ಕೆಲವು ನಿರ್ಧಾರಗಳನ್ನು ಕೈಗೊಂಡಿದ್ದು, ಅಶ್ಲೀಲವಿಲ್ಲದ ವೆಬ್ ಸೈಟ್ ಗಳ ಮೇಲೆ ಹೇರಿರುವ ನಿರ್ಬಂಧವನ್ನು ಕೈಬಿಡುತ್ತೇವೆಂದು ಸ್ಪಷ್ಟನೆ ನೀಡಿದ್ದಾರೆ.

ಉನ್ನತ ಮಟ್ಟದ ಸಭೆಯ ನಂತರ ಮಾತನಾಡಿದ ರವಿಶಂಕರ್ ಪ್ರಸಾದ್ ಅವರು, ಅಶ್ಲೀಲ ವೆಬ್ ಸೈಟ್ ಗಳ ನಿರ್ಬಂಧ ಕುರಿತಂತೆ ಅರ್ಜಿ ಸಲ್ಲಿಸಿದ ವ್ಯಕ್ತಿ ಈ ಪಟ್ಟಿಯನ್ನು ನ್ಯಾಯಾಲಯಕ್ಕೆ ನೀಡಿದ್ದಾರೆ. ಹೀಗಾಗಿ ನ್ಯಾಯಾಲಯದಿಂದ ಅಂತಿಮ ಆದೇಶ ಬರುವವರೆಗೂ ಅಶ್ಲೀಲ ವೆಬ್ ಸೈಟ್ ಗಳಿಗೆ ಸರ್ಕಾರ ತಾತ್ಕಾಲಿಕ ನಿರ್ಬಂಧ ಹೇರಿದೆ. ನಾವು ಯಾರ ಸಂವಹನ ಸ್ವಾತಂತ್ರ್ಯಕ್ಕೂ ಕಡಿವಾಣ ಹಾಕಿಲ್ಲ. ಅಂತರ್ಜಾಲದಲ್ಲಿ ಸ್ವತಂತ್ರವಾಗಿ ಮಾತನಾಡಲು ಸರ್ಕಾರ ಜನರಿಗೆ ಅವಕಾಶ ನೀಡಿದೆ. ಇದಕ್ಕಾಗಿ ಜನರ ಅಭಿಪ್ರಾಯ ಸಂಗ್ರಹಣೆಗೆ mygov ಎಂಬ ವೇದಿಕೆಯನ್ನು ನಿರ್ಮಾಣ ಮಾಡಿದೆ. ಇದರಲ್ಲಿ ದಿನನಿತ್ಯ ಲಕ್ಷಾಂತರ ಜನರು ಭಾಗವಹಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಇದೇ ವೇಳೆ ಸರ್ಕಾರ ತಾಲಿಬಾನಿ ಸರ್ಕಾರದಂತೆ ವರ್ತಿಸುತ್ತಿದೆ ಎಂಬ ಆರೋಪವನ್ನು ತಳ್ಳಿಹಾಕಿರುವ ಅವರು, ನಾವು ಮಾಧ್ಯಮ ಸ್ವತಂತ್ರವನ್ನು ಬೆಂಬಲಿಸುತ್ತೇವೆ. ಸಾಮಾಜಿಕ ಜಾಲತಾಣದ ಸಂವಹನವನ್ನು ಹಾಗೂ ಸ್ವತಂತ್ರ ಸಂವಹನವನ್ನು ನಾವು ಗೌರವಿಸುತ್ತೇವೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com