ವ್ಯಾಪಂ ಹಗರಣ ಸಂಬಂಧ ಈ ವರೆಗೂ 34 ಸಾವು: ಗೃಹ ಸಚಿವಾಲಯ ಮಾಹಿತಿ

ನಿಗೂಢ ಸಾವು ಹಾಗೂ ಬಹುಕೋಟಿ ಹಗರಣ ವ್ಯಾಪಂ ಹಗರಣಕ್ಕೆ ಸಂಬಂಧಿಸಿದಂತೆ ಈ ವರೆಗೂ 34 ಮಂದಿ ಸಾವನ್ನಪ್ಪಿದ್ದಾರೆಂದು ಕೇಂದ್ರ ಗೃಹ ಸಚಿವಾಲಯವು...
ವ್ಯಾಪಂ ಹಗರಣ ಸಂಬಂಧ ಈ ವರೆಗೂ 34 ಸಾವು: ಗೃಹ ಸಚಿವಾಲಯ ಮಾಹಿತಿ (ಸಂಗ್ರಹ ಚಿತ್ರ)
ವ್ಯಾಪಂ ಹಗರಣ ಸಂಬಂಧ ಈ ವರೆಗೂ 34 ಸಾವು: ಗೃಹ ಸಚಿವಾಲಯ ಮಾಹಿತಿ (ಸಂಗ್ರಹ ಚಿತ್ರ)

ನವದೆಹಲಿ: ನಿಗೂಢ ಸಾವು ಹಾಗೂ ಬಹುಕೋಟಿ ಹಗರಣ ವ್ಯಾಪಂ ಹಗರಣಕ್ಕೆ ಸಂಬಂಧಿಸಿದಂತೆ ಈ ವರೆಗೂ 34 ಮಂದಿ ಸಾವನ್ನಪ್ಪಿದ್ದಾರೆಂದು ಕೇಂದ್ರ ಗೃಹ ಸಚಿವಾಲಯವು ಬುಧವಾರ ಮಾಹಿತಿ ನೀಡಿದೆ.

ಈ ಕುರಿತಂತೆ ಮಾತನಾಡಿರುವ ಹರಿಭಾಯ್ ಪರಥಿಭಾಯ್ ಚೌಧರಿ ಅವರು, ವ್ಯಾಪಂ ಹಗರಣ ಸಂಬಂಧ ಮಧ್ಯಪ್ರದೇಶ ಸರ್ಕಾರ ನೀಡಿರುವ ಮಾಹಿತಿಯ ಪ್ರಕಾರ ಪ್ರಕರಣ ಸಂಬಂಧಪಟ್ಟಂತೆ 3007-15 ರ ಅವಧಿಯಲ್ಲಿ ಈ ವರೆಗೂ 34 ಮಂದಿ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ. ಸಾವನ್ನಪ್ಪಿದ್ದ 34 ಮಂದಿಯೂ ಹಗರಣಕ್ಕೆ ಸಂಬಂಧಿಸಿದವರಾಗಿದ್ದು, ಇವರಲ್ಲಿ 11 ಅಪಘಾತ, 15 ಆರೋಗ್ಯ ಸಮಸ್ಯೆ, 5 ಆತ್ಮಹತ್ಯೆ ಹಾಗೂ 2 ಕಾರಣವಿಲ್ಲದೆ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.

ನಿಗೂಢ ಸಾವುಗಳ ಮೂಲಕ ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ವ್ಯಾಪಂ ಹಗರಣವನ್ನು ಎಸ್ಐಟಿ ತನಿಖಾ ತಂಡ ತನಿಖೆ ನಡೆಸುತ್ತಿದ್ದು. ಎಸ್ಐಟಿ ತನಿಖೆ ಪ್ರಗತಿಯಲ್ಲಿರುವಾಗಲೇ ಪ್ರಕರಣ ಸಂಬಂಧ ಸಾಕ್ಷಿಧಾರರು ನಿಗೂಢವಾಗಿವಾಗಿ ಸಾವನ್ನಪ್ಪಿದ್ದರು. ವ್ಯಾಪಂ ಹಗರಣವನ್ನು ಸಿಬಿಐ ತನಿಖೆಗೊಪ್ಪಿಸುವಂತೆ ದೇಶದಾದ್ಯಂತ ಪ್ರತಿಭಟನೆಗಳು ನಡೆದವು. ಹೀಗಾಗಿ ಜುಲೈ.9 ರಂದು ಸುಪ್ರೀಂಕೋರ್ಟ್ ವ್ಯಾಪಂ ಹಗರಣದ ತನಿಖೆಯನ್ನು ಸಿಬಿಐ ತನಿಖೆಗೊಪ್ಪಿಸಿತ್ತು.

ಇದೀಗ ವ್ಯಾಪಂ ಹಗರಣ, ಲಲಿತ್ ಮೋದಿ ಪ್ರಕರಣಗಳು ಸಂಸತ್ತಿನಲ್ಲಿ ನಡೆಯುತ್ತಿರುವ ಮುಂಗಾರು ಅಧಿವೇಶದಲ್ಲಿ ತೀವ್ರ ಗದ್ದಲ ಮೂಡಿಸಿದ್ದು, ಪ್ರಕರಣ ಸಂಬಂಧ ಅಧಿಕಾರಿಗಳನ್ನು ವಜಾಗೊಳಿಸುವಂತೆ ಪ್ರತಿಪಕ್ಷಗಳು ಪಟ್ಟುಹಿಡಿದಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com