ಶತಾಬ್ದಿ ಎಕ್ಸ್ ಪ್ರೆಸ್ ಹರಿದು ಒಂದೇ ಕುಟುಂಬದ 6 ಮಂದಿ ಸಾವು (ಸಾಂದರ್ಭಿಕ ಚಿತ್ರ)
ದೇಶ
ಶತಾಬ್ದಿ ಎಕ್ಸ್ ಪ್ರೆಸ್ ಹರಿದು ಒಂದೇ ಕುಟುಂಬದ 6 ಮಂದಿ ಸಾವು
ನ್ಯೂ ಜಲ್ಪೈಗುರಿ-ಹೌರಾ ಶತಾಬ್ದಿ ಎಕ್ಸ್ ಪ್ರೆಸ್ ರೈಲಿನ ಚಕ್ರಕ್ಕೆ ಸಿಲುಕಿ ಒಂದೇ ಕುಟುಂಬದ ಆರು ಮಂದಿ ಸಾವನ್ನಪ್ಪಿರುವ ಧಾರುಣ ಘಟನೆಯೊಂದು ಪಶ್ಚಿಮ ಬಂಗಾಳದ ಮಾಲ್ಡಾ...
ಮಾಲ್ಡಾ: ನ್ಯೂ ಜಲ್ಪೈಗುರಿ-ಹೌರಾ ಶತಾಬ್ದಿ ಎಕ್ಸ್ ಪ್ರೆಸ್ ರೈಲಿನ ಚಕ್ರಕ್ಕೆ ಸಿಲುಕಿ ಒಂದೇ ಕುಟುಂಬದ ಆರು ಮಂದಿ ಸಾವನ್ನಪ್ಪಿರುವ ಧಾರುಣ ಘಟನೆಯೊಂದು ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ.
ಒಂದೇ ಕುಟುಂಬ ಆರು ಮಂದಿ ಸಂಬಂಧಿಕರ ಮನೆಗೆ ಹೋಗುವ ಸಲುವಾಗಿ ಕತಿಹಾರ್ ಜಿಲ್ಲೆಯ ಅಜಮ್ ನಗರದಿಂದ ಬಂದಿದ್ದಾರೆ. ಈ ವೇಳೆ ಹಳಿ ದಾಟಲು ಹೋಗಿದ್ದಾಗ ಕ್ಷಣಾರ್ಧದಲ್ಲಿ ಶತಾಬ್ದಿ ಎಕ್ಸ್ ಪ್ರೆಸ್ ಬಂದಿದೆ. ರೈಲು ಹರಿದ ಪರಿಣಾಮ ಎಲ್ಲರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಾವನ್ನಪ್ಪಿದ್ದವರನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ