ಚೆನ್ನೈ ಮೂಲದ ಸುಂದರ್ ಪಿಚ್ಚೈ 'ಗೂಗಲ್' ನ ನೂತನ ಸಿಇಓ

ಇಂಟರ್ ನೆಟ್ ದೈತ್ಯ ಗೂಗಲ್ ಸಂಸ್ಥೆಯ ನೂತನ ಸಿಇಓ ಆಗಿ ಭಾರತೀಯ ಮೂಲದ ವ್ಯಕ್ತಿ ಆಯ್ಕೆ...
ಸುಂದರ್ ಪಿಚ್ಚೈ
ಸುಂದರ್ ಪಿಚ್ಚೈ

ನ್ಯೂಯಾರ್ಕ್: ಇಂಟರ್ ನೆಟ್ ದೈತ್ಯ ಗೂಗಲ್ ಸಂಸ್ಥೆಯ ನೂತನ ಸಿಇಓ ಆಗಿ ಭಾರತೀಯ ಮೂಲದ ವ್ಯಕ್ತಿ ಆಯ್ಕೆಯಾಗಿದ್ದಾರೆ.

ಸಂಸ್ಥೆಯ ಆಡಳಿತ ಮಂಡಳಿಯ ಪುನಾರಚನೆಗೆ ಮುಂದಾಗಿರುವ ಗೂಗಲ್ ಸಂಸ್ಥಾಪಕರಾದ ಲ್ಯಾರಿ ಪೇಜ್ ಹಾಗೂ ಸರ್ಜೇಬ್ರಿನ್ ಅವರು ಸುಂದರ್ ಪಿಚ್ಚೈ ಅವರನ್ನಾ ನೂತನ ಸಿಇಓ ಆಗಿ ಘೋಷಿಸಿದ್ದಾರೆ.

ತಮಿಳುನಾಡಿನ ಚೆನ್ನೈ ನಿವಾಸಿಯಾದ 43 ವರ್ಷದ ಸುಂದರ್ ಪಿಚ್ಚೈ ಐಐಟಿ ಕರಗ್ ಪುರ್ ನಲ್ಲಿ ಇಂಜಿನಿಯರ್ ಪದವಿ ಪಡೆದಿದ್ದಾರೆ. ನಂತರ ಅಮೆರಿಕದ ಸ್ಟಾನ್ ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಎಂಎಸ್ ಹಾಗೂ ವಾಟನ್ ವಿಶ್ವವಿದ್ಯಾನಿಲಯದಲ್ಲಿ ಎಂಬಿಎ ಶಿಕ್ಷಣ ಪಡೆದಿದ್ದಾರೆ.

ನಂತರ ರೋಬಾ ಜೈ ಸಾಫ್ಟವೇರ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿ, 2004ರಲ್ಲಿ ಗೂಗಲ್ ಸಂಸ್ಥೆಗೆ ಸೇರ್ಪಡೆಗೊಂಡರು.

ಸುಂದರ್ ಪಿಚ್ಚೈ ಅವರನ್ನು ಆಯ್ಕೆ ಮಾಡಿರುವ ಗೂಗಲ್ ಸಂಸ್ಥಾಪಕರಾದ ಲ್ಯಾರಿ ಪೇಜ್, ಸುಂದರ್ ಅವರ ಡೆಡಿಕೇಶನ್ ಹಾಗೂ ಸಂಸ್ಥೆಗೆ ಸಲ್ಲಿಸುತ್ತಿರುವ ಸೇವೆ ತುಂಬಾ ಖುಷಿ ನೀಡಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com