ಸಿಹಿತಿಂಡಿ ತಿಂದು ಮಕ್ಕಳು ಅಸ್ವಸ್ಥ

ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಕಲುಷಿತ ಸಿಹಿತಿಂಡಿಗಳನ್ನು ತಿಂದು ಸುಮಾರು 40 ಮಕ್ಕಳು ಅಸ್ವಸ್ಥಗೊಂಡಿರುವ ಘಟನೆ ಬಿಹಾರದಲ್ಲಿ ಶನಿವಾರ...
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಬಿಹಾರ: ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಕಲುಷಿತ ಸಿಹಿತಿಂಡಿಗಳನ್ನು ತಿಂದು ಸುಮಾರು 40 ಮಕ್ಕಳು ಅಸ್ವಸ್ಥಗೊಂಡಿರುವ ಘಟನೆ ಬಿಹಾರದಲ್ಲಿ ಶನಿವಾರ ನಡೆದಿದೆ.

ಬಿಹಾರದ ರಾಣಿಪುರ್ ನಲ್ಲಿ ಇಂದು ಗ್ರಾಮ ಪಂಚಾಯತ್ ಅಧ್ಯಕ್ಷೆಯೊಬ್ಬರ ಪತಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಬುನಿಯಾ ಎಂಬ ಸಿಹಿತಿಂಡಿಯನ್ನು ಶಾಲಾ ಮಕ್ಕಳಿಗೆ ಹಂಚಿದ್ದರು. ಇದನ್ನು ತಿಂದ ಕೂಡಲೇ ಅಸ್ವಸ್ಥಗೊಂಡ ಸುಮಾರು 40 ಮಕ್ಕಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಜಿತ್ ಕುಮಾರ್ ಸತ್ಯಾರ್ಥಿ ತಿಳಿಸಿದ್ದಾರೆ.

ಸ್ವೀಟ್ ತಿಂದ ಕೂಡಲೇ ಮಕ್ಕಳು ಹೊಟ್ಟೆ ನೋವು ಎಂದು ಅಳಲು ಆರಂಭಿಸಿದರು. ಕೆಲವರು ವಾಂತಿ ಮಾಡಿದರು. ಇನ್ನು ಕೆಲವು ಮಕ್ಕಳು ತಲೆಸುತ್ತಿ ಬಿದ್ದರು ಎಂದು ಸತ್ಯಾರ್ಥಿ ವಿವರಿಸಿದರು.

ಮಕ್ಕಳನ್ನು ಆರಂಭದಲ್ಲಿ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ದರ್ಬಾಂಗ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ವರ್ಗಾಯಿಸಲಾಯಿತು. ಎಲ್ಲ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. ಘಟನೆ ಬಗ್ಗೆ ಸಂಪೂರ್ಣ ತನಿಖೆ ನಡೆಯುತ್ತಿದೆ ಎಂದು ಅವರು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com