ಈಶಾನ್ಯ ಭಾರತದಲ್ಲಿ ಲಘು ಭೂಕಂಪ

ರಿಕ್ಟರ್ ಮಾಪಕದಲ್ಲಿ 4.0 ಮಾಪನ ತೀವ್ರತೆಯ ಭೂಕಂಪ ಶನಿವಾರ ಈಶಾನ್ಯ ಭಾರತದ ವಿವಿಧ ಭಾಗಗಳ ಜನರನ್ನು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ರಿಕ್ಟರ್ ಮಾಪಕದಲ್ಲಿ 4.0 ಮಾಪನ ತೀವ್ರತೆಯ ಭೂಕಂಪ ಶನಿವಾರ ಈಶಾನ್ಯ ಭಾರತದ ವಿವಿಧ ಭಾಗಗಳ ಜನರನ್ನು ಬೆಚ್ಚಿಬೀಳಿಸಿದೆ.

ಇಂದು ಬೆಳಗ್ಗೆ 11.12ರ ಸುಮಾರಿಗೆ ಲಘು ತೀವ್ರತೆಯ ಭೂಕಂಪ ಸಿಕ್ಕಿಂ ರಾಜ್ಯದಲ್ಲಿ ಕಾಣಿಸಿಕೊಂಡಿತು ಎಂದು ಹವಾಮಾನ ಇಲಾಖೆ ತಿಳಿಸಿದೆ.

ಭೂಕಂಪದಿಂದ ನೆರೆ ರಾಜ್ಯಗಳಲ್ಲಿ ತುಸು ನಡುಕವುಂಟಾಗಿತ್ತು. ಇದು ಸುತ್ತಮುತ್ತ 36 ಕಿಲೋ ಮೀಟರ್ ವರೆಗೆ ವ್ಯಾಪಿಸಿತ್ತು. ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ವರದಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com