ವಯೋವೃದ್ಧೆಗೆ ಅಶ್ಲೀಲ ನಿಂದನೆ: ಗಿಳಿಗೆ ಸಮನ್ಸ್ ನೀಡಿದ ಪೊಲೀಸರು

ವಯೋವೃದ್ಥೆಯನ್ನು ಅಶ್ಲೀಲವಾಗಿ ನಿಂದಿಸಿದ ಗಿಳಿಯ ವಿರುದ್ಧ ಮಹಾರಾಷ್ಟ್ರ ಪೊಲೀಸರು ಎಫ್ಐಆರ್ ದಾಖಲಿಸಿರುವ ವಿಚಿತ್ರ ಘಟನೆ ವರದಿಯಾಗಿದೆ...
ಗಿಳಿ
ಗಿಳಿ
ಪುಣೆ: ವಯೋವೃದ್ಥೆಯನ್ನು ಅಶ್ಲೀಲವಾಗಿ ನಿಂದಿಸಿದ ಗಿಳಿಯ ವಿರುದ್ಧ ಮಹಾರಾಷ್ಟ್ರ ಪೊಲೀಸರು ಎಫ್ಐಆರ್ ದಾಖಲಿಸಿರುವ ವಿಚಿತ್ರ ಘಟನೆ ವರದಿಯಾಗಿದೆ. 
85 ವರ್ಷದ ಜನಾಬಾಯಿ ಸಾಖರ್‌ಕರ್‌ ಎಂಬ ಮಹಿಳೆ ಗಿಳಿಯೊಂದು ತನ್ನ ಬೈದಿದ್ದು, ಗಿಣಿಯ ವಿರುದ್ಧ ದೂರು ದಾಖಲಿಸುವಂತೆ ಚಂದ್ರಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಜನಬಾಯಿ ಸಾಖರ್‌ಕರ್‌ ಅವರು ಆಸ್ತಿ ವಿವಾದವೊಂದರಲ್ಲಿ ಗಿಳಿಯ ಮಾಲೀಕ ಅದಕ್ಕೆ ನನ್ನನ್ನು ಬೈಯುವಂತೆ ಕಲಿಸಿದ್ದಾನೆ ಎಂದು ಆರೋಪಿಸಿದ್ದಾಳೆ. ಈ ಗಿಳಿಯು ಜನಾಬಾಯಿ ಅವರ ಮಲತಾಯಿ ಮಗ ಸುರೇಶ್‌ ಸಾಖರಕರ್‌ ಅವರ ಅಧೀನದಲ್ಲಿದೆ. ನನ್ನ ಮತ್ತು ಸುರೇಶ್‌ ನಡುವೆ ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ವಾದ-ವಿವಾದ ಇದೆ. ಅದಕ್ಕಾಗಿಯೇ ಆ ಗಿಳಿ ನನಗೆ ಬೈಯುತ್ತದೆ ಎಂದು ಜನಾಬಾಯಿ ಆರೋಪಿಸಿದ್ದಾಳೆ.
ಪೊಲೀಸರ ತಪಾಸಣೆಯಲ್ಲಿ ಗಿಳಿಯು ಮಹಿಳೆಯನ್ನು ಬೈದಿರುವುದಾಗಿ ಯಾವುದೇ ಪುರಾವೆ ಲಭಿಸಿಲ್ಲ ಕಾರಣ. ಗಿಳಿಯ ವಿರುದ್ಧ ಸಂವಿಧಾನದ ಯಾವ ಕಲಂ ಅನ್ನು ಅನ್ವಯಿಸಬೇಕು ಎಂಬುದು  ಪೊಲೀಸರಿಗೆ ತಲೆ ನೋವಿವಾಗಿ ಪರಿಣಮಿಸಿದ್ದು, ಪೊಲೀಸರು ಗಿಳಿಯನ್ನು ಅರಣ್ಯ ಇಲಾಖೆಗೆ ಒಪ್ಪಿಸುವ ಚಿಂತನೆಯಲ್ಲಿದ್ದಾರೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com