ಶಾಲೆಗಳಲ್ಲಿ ಜಂಕ್‌ಫುಡ್‌ ನಿಷೇಧಕ್ಕೆ ಉನ್ನತ ಸಮಿತಿ ಶಿಫಾರಸು

ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಜಂಕ್‌ಫುಡ್‌ ಮಾರಾಟಕ್ಕೆ ಶಾಲೆಯಲ್ಲಿ ಹಾಗೂ ಸುತ್ತಾಮುತ್ತಾ ನಿಷೇಧವೇರಬೇಕು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಜಂಕ್‌ಫುಡ್‌ ಮಾರಾಟಕ್ಕೆ ಶಾಲೆಯಲ್ಲಿ ಹಾಗೂ ಶಾಲೆಯ ಸುತ್ತಾಮುತ್ತಾ ನಿಷೇಧವೇರಬೇಕು ಎಂದು ಕೇಂದ್ರ ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಸಚಿವಾಲಯ ನೇಮಕ ಮಾಡಿದ ಉನ್ನತ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಇತ್ತೀಚೆಗೆ ಶಾಲೆಯ ಕ್ಯಾಂಟೀನ್ ನಲ್ಲಿ ಆಹಾರ, ಕುರುಕಲು ತಿಂಡಿ ತಿನಿಸುಗಳನ್ನು(ಜಂಕ್‌ಫುಡ್‌) ಮಾರಾಟ ಹೆಚ್ಚಾಗಿದೆ. ಅಲ್ಲದೇ ಮಕ್ಕಳಿಗೆ ಲಂಚ್ ಬಾಕ್ಸ್ ಆಗಿ ಜಂಕ್‌ಫುಡ್‌ ನೀಡಲಾಗುತ್ತಿದೆ. ಇದರಿಂದ ಮಕ್ಕಳಲ್ಲಿ ಬೊಜ್ಜು, ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಹೆಚ್ಚಾಗುತ್ತಿದೆ. ಈ ಹಿನ್ನಲೆಯಲ್ಲಿ ಶಾಲೆಯಲ್ಲಿ ಹಾಗೂ ಶಾಲೆಯ ಸುತ್ತಾಮುತ್ತಾ ಜಂಕ್‌ಫುಡ್‌ ಮಾರಾಟಕ್ಕೆ ನಿಷೇಧವೇರಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.

ಜಂಕ್ ಫುಟ್ ಸೇವನೆಯಿಂದ ಮಕ್ಕಳ ಮಾನಸಿಕ ಮತ್ತು ನಡುವಳಿಕೆಯ ಮೇಲೆ ಪರಿಣಾಮ ಬೀರುವುದಲ್ಲದೇ, ಅಸಮಾಧಾನ ಮತ್ತು ಆತ್ಮವಿಶ್ವಾಸದ ಕೊರತೆಯೂ ಹೆಚ್ಚಾಗಿದೆ. ಮಕ್ಕಳಿಗೆ ಬೇಕಾದಂತ ಅಗತ್ಯ ಪೌಷ್ಠಿಕಾಂಶಗಳು ಇದರಲ್ಲಿ ಇಲ್ಲದೇ ಇರುವ ಕಾರಣ ಮಕ್ಕಳು ಹೆಚ್ಚು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಎಂದು ಸಮತಿಯ ವರದಿ ಹೇಳಿದೆ.

ಶಾಲಾ ಆವರಣದ 200 ಮೀಟರ್‌ ವ್ಯಾಪ್ತಿಯಲ್ಲಿ ಬೀದಿ ಬದಿಯ ವರ್ತಕರು ಅಂಗಡಿಗಳು ಮತ್ತು ಹೋಟೆಲ್‌ಗಳಿಗೆ ಇಂತಹ ತಿಂಡಿ, ತಿನಿಸುಗಳನ್ನು ವಿದ್ಯಾರ್ಥಿಗಳಿಗೆ ಮಾರಾಟ ಮಾಡದಂತೆ ಸೂಚಿಸಬೇಕು ಎಂದು ಸಮಿತಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com