
ನವದೆಹಲಿ: ಭಾರತೀಯ ಸೇನೆಗೆ ಮುಜುಗರ ಉಂಟಾಗುವ ರೀತಿಯಲ್ಲಿ ಜಾಹಿರಾತೊಂದು ಪ್ರಕಟವಾಗಿದೆ. ಈ ಜಾಹೀರಾತಿನಲ್ಲಿ ದೇಶದ ಹೆಮ್ಮೆಯ ಪ್ರತೀಕವಾಗಿರುವ 1965 ಭಾರತ- ಪಾಕ್ ಯುದ್ಧದ ಇತಿಹಾಸವನ್ನು ಪುನಃ ಬರೆಯಲಾಗಿದ್ದು ಯುದ್ಧದ ಗೆಲುವನ್ನು ಪಾಕಿಸ್ತಾನಕ್ಕೆ ಒಪ್ಪಿಸಲಾಗಿದೆ.
ಹಿಂದಿ ದೈನಂದಿಕ ಪತ್ರಿಕೆಗಳಲ್ಲಿ ಪೂರ್ತಿ ಒಂದು ಪುಟದ ಜಾಹೀರಾತು ಪ್ರಕಟವಾಗಿದ್ದು, ಭಾರತ- ಪಾಕಿಸ್ತಾನದ ಯುದ್ಧದಲ್ಲಿ 15 ನೇ ಪದಾತಿಸೈನ್ಯದ ವಿಭಾಗದ ಪಾತ್ರದ ಬಗ್ಗೆ ಉಲ್ಲೇಖಿಸಿರುವಲ್ಲಿ ಯಡವಟ್ಟು ನಡೆದಿದ್ದು, ಭಾರತ ಸೇನೆ ಪಾಕಿಸ್ತಾನದ ದಾಳಿಗೆ ಬೆದರಿತ್ತು ಎಂದು ಬರೆಯಲಾಗಿದೆ. ಇಂಗ್ಲೀಷ್ ಪತ್ರಿಕೆಗಳಲ್ಲಿನ ಜಾಹೀರಾತೂ ಸಹ ಉತ್ತಮವಾಗಿರಲಿಲ್ಲ ಎಂದು ಹೇಳಲಾಗಿದೆ.
"ಪಾಕಿಸ್ತಾನದ ಶಸ್ತ್ರಸಜ್ಜಿತ ಸೈನಿಕರು ಖೇಮ್ ಕರಣ್ ಕಡೆಗೆ ಆಕ್ರಮಣಕಾರಿ ದಾಳಿ ನಡೆಸಿದ್ದರು. ಸೆಪ್ಟೆಂಬರ್ 10 ರಿಂದ 13 ರ ವರೆಗೆ ಪ್ರತಿ ದಾಳಿ ನಡೆಸಿದ್ದ ಸೇನೆ 400 ಟ್ಯಾಂಕರ್‌ಗಳನ್ನು ನಾಶಪಡಿಸಿತ್ತು. ಆದರೆ ಈ ಹೋರಾಟದ ಸಂಪೂರ್ಣ ದಾಳಿಯಲ್ಲಿ ಭಾರತೀಯ ಸೇನೆಯ ಪಾತ್ರವನ್ನು ಉಲ್ಲೇಖಿಸಿಲ್ಲ.
ಅಸಾಲ್ ಉತ್ತರ್ ಯುದ್ಧ 1965 ರಲ್ಲಿ ನಡೆದ ಭಾರತ- ಪಾಕಿಸ್ತಾನ ನಡುವೆ ನಡೆದ ಯುದ್ಧದ ಅತಿ ದೊಡ್ಡ ಟ್ಯಾಂಕರ್ ಗಳ ಯುದ್ಧವಾಗಿದೆ. 1965 ರ ಯುದ್ಧದ 50 ನೇ ವರ್ಷದ ಯುದ್ಧದ ವಿಜಯದ ಸ್ಮರಣೆಯನ್ನು ಮೋದಿ ಸರ್ಕಾರ ಐತಿಹಾಸಿಕವಾಗಿ ನಡೆಸಲು ಯೋಜನೆ ರೂಪಿಸಿತ್ತು. ಆದರೆ ಕಾರ್ಯಕ್ರಮದ ಬಗ್ಗೆ ನೀಡುವ ಜಾಹೀರಾತಿನಲ್ಲಿ ಭಾರತೀಯ ಸೇನೆಗೆ ಮುಜುಗರವಾಗುವಂತಹ ಅಂಶ ಪ್ರಕಟವಾಗಿದೆ. ಭಾರತಿಯ ಸೇನೆಯ ಸಾರ್ವಜನಿಕ ಮಾಹಿತಿ ವಿಭಾಗದ ಹೆಚ್ಚುವರಿ ಮಹಾ ನಿರ್ದೇಶಕರು ಈ ಯಡವಟ್ಟಿನ ಬಗ್ಗೆ ಪ್ರತಿಕ್ರಿಯಿಸಿದ್ದು ಮಾಧ್ಯಮಗಳ ತಿಪ್ಪಿನಿಂದಾಗಿ ಈ ರಿತಿಯಾಗಿದ್ದು, ಶೀಘ್ರವೇ ಸರಿಪಡಿಸುವುದಾಗಿ ತಿಳಿಸಿದ್ದಾರೆ. ರಕ್ಷಣಾ ಇಲಾಖೆ ಅಧಿಕಾರಿಗಳು ಈ ಘಟನೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Advertisement