
ನವದೆಹಲಿ: ಮುಸಲ್ಮಾನ ಸಮುದಾಯದಲ್ಲಿರುವ ಮೌಖಿಕ ತಲಾಕ್ ಅಂದರೆ ಬಾಯಿಮಾತಿನ ಮೂಲಕ ವಿಚ್ಛೇಧನ ನೀಡುವ ಪದ್ಧತಿಗೆ ಶೇ. 90 ರಷ್ಟು ಮುಸ್ಲಿಂ ಮಹಿಳೆಯರು ವಿರೋಧ ವ್ಯಕ್ತ ಪಡಿಸಿದ್ದಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ.
ಭಾರತೀಯ ಮುಸ್ಲಿಂ ಮಹಿಳಾ ಆಂದೋಲನ ನಡೆಸಿದ ಸಮೀಕ್ಷೆ ಪ್ರಕಾರ ದೇಶದ ಶೇ.92.1 ರಷ್ಟು ಮುಸ್ಲಿಂ ಮಹಿಳೆಯರು ಮೌಖಿಕ ತಲಾಕ್ ಅನ್ನು ವಿರೋಧಿಸಿದ್ದಾರೆ. ಮುಸಲ್ಮಾನ ಗಂಡಸರ ಬಹುಪತ್ನಿತ್ವಕ್ಕೂ ಕೂಡ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಜೊತೆಗೆ ಏಕ ಪಕ್ಷೀಯವಾಗಿ ವಿಚ್ಚೇಧನ ನೀಡುವುದನ್ನು ಖಂಡಿಸಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.
ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಬಿಹಾರ ಜಾರ್ಖಂಡ್ ಸೇರಿದಂತೆ ದೇಶದ 10 ರಾಜ್ಯಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಈ ಮಾಹಿತಿ ತಿಳಿದು ಬಂದಿದೆ. ಮೌಖಿಕವಾಗಿ ತಲಾಕ್ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹಲವು ಮುಸ್ಲಿಂ ಮಹಿಳೆಯರು ಒತ್ತಾಯಿಸಿದ್ದಾರೆ.
Advertisement