ಅಸ್ಸಾಂ ಪ್ರವಾಹಕ್ಕೆ ಮೂರು ಬಲಿ: 1 ಸಾವಿರ ಹಳ್ಳಿಗಳು ಜಲಾವೃತ

ಅಸ್ಸಾಂ ನಲ್ಲಿ ಸಂಭವಿಸಿರುವ ಭೀಕರ ಪ್ರವಾಹದಿಂದ ಮೂವರು ಸಾವನ್ನಪ್ಪಿ ಸುಮಾರು 6 ಲಕ್ಷ ಮಂದಿ ಪ್ರವಾಹದಿಂದಾಗಿ...
ಅಸ್ಸಾಂ ನಲ್ಲಿ ಪ್ರವಾಹದಿಂದ ಜಲಾವೃತಗೊಂಡಿರುವ ಗ್ರಾಮಗಳು
ಅಸ್ಸಾಂ ನಲ್ಲಿ ಪ್ರವಾಹದಿಂದ ಜಲಾವೃತಗೊಂಡಿರುವ ಗ್ರಾಮಗಳು

ಚಿರಾಂಗ್ ಆಸ್ಸಾಂ: ಅಸ್ಸಾಂ ನಲ್ಲಿ ಸಂಭವಿಸಿರುವ ಭೀಕರ ಪ್ರವಾಹದಿಂದ ಮೂವರು  ಸಾವನ್ನಪ್ಪಿ ಸುಮಾರು 6 ಲಕ್ಷ ಮಂದಿ ಪ್ರವಾಹದಿಂದಾಗಿ ಮನೆ ಮಠ ಕಳೆದುಕೊಂಡು ಸಂತ್ರಸ್ತರಾಗಿದ್ದಾರೆ. ಪ್ರವಾಹ ಪೀಡಿತ ಅಸ್ಸಾಂನಲ್ಲಿ ರಕ್ಷಣಾ ಕಾರ್ಯಾಚರಣೆಗಾಗಿ  ಭಾರತೀಯ ಸೇನೆಯ ಆರು ತಂಡಗಳು ಧಾವಿಸಿವೆ. ರಾಜ್ಯ ಸರ್ಕಾರ ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದೆ.

ಸುಮಾರು 1 ಸಾವಿರ ಹಳ್ಳಿಗಳು ಜವಲಾವೃತಗೊಂಡಿದ್ದು, ಪ್ರವಾಹದಲ್ಲಿ ಸಿಲುಕಿರುವ ಜನ-ಜಾನುವಾರುಗಳ ರಕ್ಷಣೆಗೆ ರಕ್ಷಣಾ ತಂಡಗಳು ಹರ ಸಾಹಸ ಪಡುತ್ತಿವೆ. 28 ವರ್ಷದ ಫೈಜುಲ್ ಹೋಕ್ ಎಂಬ ಯುವಕನನ್ನು ಸೇನೆ ರಕ್ಷಿಸಿದ್ದು, ಆತನ ಕುಟುಂಬದ 8 ಮಂದಿ ಜಲಾವೃತಗೊಂಡಿರುವ ಮನೆಗಳಲ್ಲಿ ಸಿಲುಕಿ ಕೊಂಡಿದ್ದಾರೆ. ಅವರನ್ನು ರಕ್ಷಿಸಲು ರಕ್ಷಣಾ ಪಡೆ ಮುಂದಾಗಿದೆ.

ಕಳೆದ ಆರು ದಿನಗಳಿಂದ ಅಸ್ಸಾಂನ 19 ಜಿಲ್ಲೆಗಳಲ್ಲಿ  ಪ್ರವಾಹಕ್ಕೆ ಸಿಲುಕಿಕೊಂಡು ಲಕ್ಷಾಂತರ ಜನ ತೊಂದರೆ ಅನುಭವಿಸುತ್ತಿದ್ದಾರೆ. ಊಟ ತಿಂಡಿಯಿಲ್ಲದೇ ಹಸಿವಿನಿಂದ ಕಂಗಲಾಗಿದ್ದು, ಇವರನ್ನು ರಕ್ಷಿಸಲು ರಕ್ಷಣಾ ತಂಡ ಧಾವಿಸಿದೆ. ಇನ್ನು ಸಾವಿರಾರು ಹೇಕ್ಟೇರ್ ಬೆಳೆಗಳು ಜಲಾವೃತಗೊಂಡು ಸಂಪೂರ್ಣ ನಾಶವಾಗಿದೆ. ಇದುವರೆಗೂ ಸೇನಾ ಸಿಬ್ಬಂದಿ 1.500 ಮಂದಿ ಗ್ರಾಮಸ್ಥರನ್ನು ರಕ್ಷಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com