ನವದೆಹಲಿ: ವ್ಯಕ್ತಿಯೊಬ್ಬ ಮೆಟ್ರೋ ರೈಲಿನಲ್ಲಿ ಮೂತ್ರ ವಿಸರ್ಜನೆ ಮಾಡಿದ ದೃಶ್ಯ ಬಹಿರಂಗಾವಾದ ನಂತರ ಇಂಥದ್ದೇ ಒಂದು ಸನ್ನಿವೇಶ ನಡದಿದೆ. ಕಂಠ ಪೂರ್ತಿ ಕುಡಿದು ತೂರಾಡುತ್ತಿದ್ದ ಪೊಲೀಸ್ ಪೇದೆಯೊಬ್ಬ ದೆಹಲಿ ಮೆಟ್ರೋ ರೈಲಿನೊಳಗೆ ಪ್ರವೇಶಿಸಿದ್ದಾನೆ.
ದಿನಾಂಕ ನಮೂದಾಗದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಫುಲ್ ಟೈಟ್ ಆಗಿದ್ದ ಪೊಲೀಸ್ ಪೇದೆ ಮೆಟ್ರೋ ರೈಲಿನಲ್ಲಿ ಸರಿಯಾಗಿ ನಿಂತುಕೊಳ್ಳಲೂ ಸಾಧ್ಯವಾಗದೇ ತೂರಾಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ದೆಹಲಿಯ ಅಜಾದ್‌ಪುರ ಮೆಟ್ರೋ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು ರೈಲಿನ ಬೋಗಿಯಲ್ಲೇ ಬಿದ್ದ ಪೊಲೀಸ್ ಪೇದೆಯನ್ನು ಸಾರ್ವಜನಿಕರೇ ಮೇಲಕ್ಕೆತ್ತಿದ್ದಾರೆ.
ಈ ಹಿಂದೆ ಓರ್ವ ವ್ಯಕ್ತಿ ಮೆಟ್ರೋ ರೈಲಿನಲ್ಲಿ ಮೂತ್ರ ವಿಸರ್ಜನೆ ಮಾಡಿದ್ದ ಘಟನೆ ನಡೆದಿತ್ತು, ಆದರೆ ಈ ಬಾರಿ ಓರ್ವ ಜವಾಬ್ದಾರಿಯುತ ಪೊಲೀಸ್ ಪೇದೆ ಮೆಟ್ರೋ ಮದ್ಯ ಸೇವಿಸಿ ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡುವ ವೇಳೆ ಬಿದ್ದಿದ್ದಾನೆ.
Advertisement