ನವದೆಹಲಿ: ಗಡುವಿಗೂ ಮೊದಲೇ ಭಾರತ ಧನುವಾರ್ಯು ಮುಕ್ತ ದೇಶವಾಗಿ ಹೊರಹೊಮ್ಮಿದ್ದು, ಈ ಸಾಧನೆಯನ್ನು ಪ್ರಮುಖ ಮೈಲಿಗಲ್ಲು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಣ್ಣಿಸಿದ್ದಾರೆ.
ಗ್ಲೋಬಲ್ ಕಾಲ್ ಟು ಆಕ್ಷನ್ ಸಮಾವೇಶ ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಭಾರತದ ಮಹತ್ವದ ಈ ಸಾಧನೆಯನ್ನು ನಿಮ್ಮ ಮುಂದೆ ಹಂಚಿಕೊಳ್ಳಲು ಹರ್ಷಿಸುತ್ತೇನೆ. ಭಾರತ ತಾಯಿ ಮತ್ತು ನವಜಾತ ಶಿಶುವಿನ ಧನುವಾರ್ಯು ಸೋಂಕು ರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಿದೆ ಎಂದರು.
2015ರ ಡಿಸೆಂಬರ್ ಅಂತ್ಯದೊಳಗೆ ಈ ರೋಗ ನಿರ್ಮೂಲನೆ ಮಾಡುವ ಗುರಿ ಹೊಂದಲಾಗಿತ್ತು. ಈ ಅವಧಿಗೂ ಮುನ್ನವೇ ಈ ಯಶಸ್ಸು ಇತರ ಗುರಿಗಳನ್ನು ಮಟ್ಟಲು ಭಾರತಕ್ಕೆ ವಿಶ್ವಾಸ ನೀಡಿದೆ. ತಾಯಿ ಮತ್ತು ಶಿಶುಮರಣದ ವಿಚಾರದಲ್ಲಿ ವಿಶ್ವಸಂಸ್ಥೆಯ ಮಿಲೇನಿಯಮ್ ಡೆವಲಪ್ ಮೆಂಟ್ ಎಂಡಿಜಿ ನ ಗುರಿ ತಲುಪುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಿಷನ್ ಇಂದ್ರಧನುಷ್ ಎಂಬ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡ ಭಾರತ, ಹೆರಿಗೆ ವೇಳೆ ತಾಯಿ ಮತ್ತು ಮಗುವಿಗೆ ಸೂಕ್ತ ಚಿಕಿತ್ಸೆ ದೊರೆಯುವಂತೆ ಮಾಡಿತು. ಇದರ ಫಲವಾಗಿಯೇ ಇಂದು ದೇಶ ಧನುವಾರ್ಯು ಮುಕ್ತವಾಗಿದೆ. 1990ರಲ್ಲಿ 126 ಇದ್ದ ಐದು ವರ್ಷದೊಳಗಿನ ಮಕ್ಕಳ ಸಾವಿನ ಸಂಖ್ಯೆ 2013ರಲ್ಲಿ 49ಕ್ಕೆ ಕುಸಿದಿದೆ.