ಅಕ್ರಮ್ ಫಿರೋಜ್ (ಚಿತ್ರಕೃಪೆ: ಫೇಸ್ ಬುಕ್)
ದೇಶ
ಕಲಾವಿದನ ಬಿಡುಗಡೆಗೆ ಆದೇಶ
ಭಾರತ-ಪಾಕ್ ಗಡಿಯ ನಿರ್ಬಂಧಿತ ಪ್ರದೇಶಕ್ಕೆ ಪ್ರವೇಶಿಸಿದ ಹಿನ್ನೆಲೆಯಲ್ಲಿ ಬಂಧಿತನಾಗಿದ್ದ ತೆಲಂಗಾಣದ ರಂಗಭೂಮಿ ಕಲಾವಿದನ ಬಿಡುಗಡೆಗೆ ಇಲ್ಲಿನ ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶಿದೆ...
ಜೈಸಲ್ಮೇರ್: ಭಾರತ ಪಾಕ್ ಗಡಿಯ ನಿರ್ಬಂಧಿತ ಪ್ರದೇಶಕ್ಕೆ ಪ್ರವೇಶಿಸಿದ ಹಿನ್ನೆಲೆಯಲ್ಲಿ ಬಂಧಿತನಾಗಿದ್ದ ತೆಲಂಗಾಣದ ರಂಗಭೂಮಿ ಕಲಾವಿದನ ಬಿಡುಗಡೆಗೆ ಇಲ್ಲಿನ ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶಿದೆ.
ಕರೀಂನಗರದ ಅಕ್ರಂ ಫಿರೋಜ್(26) ನನ್ನು ಎರಡು ವಾರಗಳ ಹಿಂದೆ ನಿರ್ಬಂಧಿತ ಗಡಿ ಪ್ರದೇಶದಲ್ಲಿ ಬಂಧಿಸಲಾಗಿತ್ತು. ತಾನು ಥಿಯೇಟರ್ ಅಟ್ ಬಾರ್ಡರ್ಸ್ ಹೆಸರಲ್ಲಿ ಕಛ್‍ನಿಂದ
ಕೋಲ್ಕತ್ತಾವರೆಗೆ ಗಡಿಗುಂಟ ಸಂಚರಿಸಿ ರಂಗಭೂಮಿ ಜಾಗೃತಿ ಮೂಡಿಸುವ ಉದ್ದೇಶದಿಂದ ಬಂದಿರುವುದಾಗಿ ಫಿರೋಜ್ ಹೇಳಿಕೊಂಡಿದ್ದಾನೆ. ಆತನ ಉದ್ದೇಶ ಆಲಿಸಿದ ಕೋರ್ಟ್ ಇದೀಗ
ಜಾಮೀನಿನ ಮೇಲೆ ಬಿಡುಗಡೆಗೆ ಆದೇಶಿಸಿದೆ. ಫಿರೋಜ್ ಹಲವು ಬಾರಿ ರಂಗ ಜಾಗೃತಿಗಾಗಿ ದೇಶದ ಉದ್ದಗಲ ಸಂಚರಿಸಿದ್ದಾನೆ ಎನ್ನಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ