ಮುತಾಲಿಕ್‍ಗೆ ಸುಪ್ರೀಂ ಚಾಟಿ

ಗೋವಾ ಜನರು ತಮ್ಮ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುತ್ತಾರೆ. ನೀವೇನು ಮಾಡುತ್ತಿರಿ? ಸುಮ್ಮನೆ ನೈತಿಕ ಪೊಲೀಸ್‍ಗಿರಿ ಮಾಡುತ್ತೀರಿ...
ಪ್ರಮೋದ್ ಮುತಾಲಿಕ್
ಪ್ರಮೋದ್ ಮುತಾಲಿಕ್
ನವದೆಹಲಿ: 'ಗೋವಾ ಜನರು ತಮ್ಮ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುತ್ತಾರೆ. ನೀವೇನು ಮಾಡುತ್ತಿರಿ? ಸುಮ್ಮನೆ ನೈತಿಕ ಪೊಲೀಸ್‍ಗಿರಿ ಮಾಡುತ್ತೀರಿ. 
ಪಬ್‍ಗಳಿಗೆ ನುಗ್ಗಿ ನೀವು (ಶ್ರೀರಾಮ ಸೇನೆ ಕಾರ್ಯ- ಕರ್ತರು) ಯುವಕ-ಯುವತಿಯರನ್ನು ಥಳಿಸುತ್ತೀರಿ. ಸದ್ಯಕ್ಕೆ ನಿಮ್ಮ ಮನವಿ ಪುರಸ್ಕರಿಸಲು ಸಾಧ್ಯವಿಲ್ಲ. ಆರು ತಿಂಗಳ ನಂತರ ಬನ್ನಿ ಪರಿಶೀಲಿಸೋಣ''. ಇದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರನ್ನು ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡ ಪರಿ.
ಗೋವಾ ಪ್ರವೇಶಿಸದಂತೆ ಬಾಂಬೆ ಹೈಕೋರ್ಟ್ ನ ಗೋವಾ ಪೀಠ ನೀಡಿದ್ದ ಆದೇಶವನ್ನು ರದ್ದು ಪಡಿಸುವಂತೆ ಕೋರಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ ಮುತಾಲಿಕ್‍ಗೆ ತೀವ್ರ ಹಿನ್ನಡೆಯಾಗಿದೆ. ಅಷ್ಟೇ ಅಲ್ಲ, ಮುಖ್ಯ ನ್ಯಾ. ಎಚ್.ಎಲ್ .ದತ್ತು ಮತ್ತು ನ್ಯಾ.ಅಮಿತಾವಾ ರಾಯ್ ನೇತೃತ್ವದ ಪೀಠ, ಶಾಂತಿ ಕಾಪಾಡುವ ದೃಷ್ಟಿಯಿಂದ ಗೋವಾ ನ್ಯಾಯಪೀಠ ಈ ಆದೇಶ ನೀಡಿದೆ ಎಂದು ಹೇಳಿದೆ. ಈ ಮೂಲಕ ಬಾಂಬೆ ಹೈಕೋರ್ಟ್‍ನ ಆದೇಶ ರದ್ದು ಮಾಡಬೇಕೆಂಬ ಪ್ರಮೋದ್ ಮುತಾಲಿಕ್ ಮನವಿಯನ್ನು ತಿರಸ್ಕರಿಸಿದೆ. 
ಹಿನ್ನೆಲೆ ಏನು?: ಉತ್ತರ ಮತ್ತು ದಕ್ಷಿಣ ಗೋವಾ ಜಿಲ್ಲಾಡಳಿತ ಕಳೆದ ವರ್ಷದ ಆ.19ರಂದು ಶ್ರೀರಾಮ ಸೇನೆ ಕಾರ್ಯಕರ್ತರು 2 ತಿಂಗಳು ಪ್ರಮೋದ್ ಮುತಾಲಿಕ್ ಮತ್ತು ಅವರ ಸಂಘಟನೆಯಾಗಿರುವ ಶ್ರೀರಾಮ ಸೇನೆ ಸದಸ್ಯರು ಗೋವಾ ಪ್ರವೇಶಿಸದಂತೆ ನಿರ್ಬಂಧಿಸಿ ಆದೇಶ ಹೊರಡಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com