ವಿಧಾನಸಭೆಯಲ್ಲಿ ಜನಲೋಕಪಾಲ್ ಬಿಲ್ ಕುರಿತು ಮಾತನಾಡಿದ್ದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಆಮ್ ಆದ್ಮಿ ಪಕ್ಷ ಸ್ಥಾಪಿಸಿದಾಗ ಪ್ರಮುಖ ರಾಜಕೀಯ ಪಕ್ಷಗಳು ಅಪಹಾಸ್ಯ ಮಾಡಿದ್ದವು. ಅಲ್ಲದೆ ಚುನಾವಣೆ ಎದುರಿಸುವಂತೆ ಸವಾಲು ಹಾಕಿದ್ದರು. ಜನರ ಆಶೀರ್ವಾದದಿಂದಾಗಿ ನಾವು ವಿಧಾನಸಭೆಯಲ್ಲಿ ಸುಮಾರು 67 ಕ್ಷೇತ್ರಗಳಲ್ಲಿ ಭರ್ಜರಿಯಾಗಿ ಗೆಲವು ಸಾಧಿಸಿ, ಇಂದು ಜನಲೋಕಪಾಲ್ ಬಿಲ್ ರೂಪಿಸಿದ್ದೇವೆ ಎಂದರು.