ಬುಲೆಟ್ ಟ್ರೈನ್ ಯೋಜನೆಗೆ ಇಂದು ಸಹಿ, ಭಾರತ-ಜಪಾನ್ ಪಿಎಂಗಳ ಸಮ್ಮುಖದಲ್ಲಿ ಒಪ್ಪಂದ

ಜಪಾನ್ ಪ್ರಧಾನಿ ಶಿಂಜೋ ಅಬೆ ಮೂರು ದಿನಗಳ ಭಾರತ ಪ್ರವಾಸಕ್ಕಾಗಿ ಶುಕ್ರವಾರ ದೆಹಲಿಗೆ ಆಗಮಿಸಿದ್ದಾರೆ. ಈ ಪ್ರವಾಸದ ಪ್ರಮುಖ ಅಂಶವೇನೆಂದರೆ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ/ ವಾರಾಣಸಿ: ಜಪಾನ್ ಪ್ರಧಾನಿ ಶಿಂಜೋ ಅಬೆ ಮೂರು ದಿನಗಳ ಭಾರತ ಪ್ರವಾಸಕ್ಕಾಗಿ ಶುಕ್ರವಾರ ದೆಹಲಿಗೆ ಆಗಮಿಸಿದ್ದಾರೆ. ಈ ಪ್ರವಾಸದ ಪ್ರಮುಖ ಅಂಶವೇನೆಂದರೆ ಮುಂಬೈಅಹಮದಾಬಾದ್ ನಡುವಿನ ದೇಶದ ಮೊದಲ ಬುಲೆಟ್ ಟ್ರೈನ್ ಯೋಜನೆಗೆ ಸಹಿ ಹಾಕಲಾಗುತ್ತದೆ.

ಅಂದ ಹಾಗೆ ಈ ಯೋಜನೆಯ ಒಟ್ಟು ಮೊತ್ತ ರು.98 ಸಾವಿರ ಕೋಟಿ. ಇದರ ಜತೆಗೆ ನಾಗರಿಕ ಅಣು ಒಪ್ಪಂದಕ್ಕೂ ಸಹಿ ಹಾಕಲಾಗುತ್ತದೆ. ಇದರ ಜತೆಗೆ ಶನಿವಾರ ದೆಹಲಿಯಲ್ಲಿ 9ನೇ ಜಪಾನ್-ಭಾರತ ಸಮ್ಮೇಳನ ನಡೆಯಲಿದೆ. ಜತೆಗೆ ಹಲವು ದ್ವಿಪಕ್ಷೀಯ ಮಟ್ಟದ ಸಮಾಲೋಚನೆಗಳು ನಡೆಯಲಿವೆ. ಜತೆಗೆ ಒಪ್ಪಂದಗಳಿಗೆ ಸಹಿ ಹಾಕಲಾಗುತ್ತದೆ.

ಜಪಾನ್ ಪ್ರಧಾನಿ ಶಿಂಜೋ ಅಬೆ ಪ್ರಧಾನಿ ಮೋದಿ ಅವರ ಲೋಕಸಭಾ ಕ್ಷೇತ್ರ ವಾರಾಣಸಿಗೆ ಭೇಟಿ ನೀಡಲಿದ್ದಾರೆ. ನಾಲ್ಕು ಗಂಟೆಗಳ ಕಾಲದ ಪ್ರವಾಸದ ವೇಳೆಯಲ್ಲಿ ದಶಾಶ್ವಮೇಧ ಘಾಟ್‍ನಲ್ಲಿ ನಡೆಯುವ ಗಂಗಾ ಆರತಿಯಲ್ಲಿ ಭಾಗವಹಿಸಲಿದ್ದಾರೆ. ಕಳೆದ ವರ್ಷದ ಆಗಸ್ಟ್‍ನಲ್ಲಿ ಪ್ರಧಾನಿ ಮೋದಿ ಜಪಾನ್ ಪ್ರವಾಸ ಕೈಗೊಂಡಿದ್ದರು.

ಚೀನಾ ಮಾಧ್ಯಮ ಟೀಕೆ:
ಅಬೆ ಪ್ರವಾಸಕ್ಕೆ ಚೀನಾದ ಮಾಧ್ಯಮಗಳು ಟೀಕೆ ವ್ಯಕ್ತಪಡಿಸಿವೆ. ಏಷ್ಯಾ ವಲಯದಲ್ಲಿ ಚೀನಾಕ್ಕೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿಯೇ ಈ ಪ್ರವಾಸ ಕೈಗೊಳ್ಳಲಾಗಿದೆ ಎಂದು ಅವು ಪ್ರತಿಪಾದಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com