ಮಾನವ ಅಭಿವೃದ್ಧಿಯಲ್ಲಿ ಭಾರತ ಸುಧಾರಣೆ

ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಭಾರತದ ಸ್ಥಾನ ಹಂತ ಹಂತವಾಗಿ ಸುಧಾರಿಸುತ್ತಿದೆ. ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ 2014ರ ಮಾನವ...
ಭಾರತ ಧ್ವಜ
ಭಾರತ ಧ್ವಜ
ನವದೆಹಲಿ: ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಭಾರತದ ಸ್ಥಾನ ಹಂತ ಹಂತವಾಗಿ ಸುಧಾರಿಸುತ್ತಿದೆ. ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ 2014ರ ಮಾನವ ಅಭಿವೃದ್ಧಿ ಯೋಜನೆ (ಯುಎನ್ ಡಿಪಿ)ಯಲ್ಲಿ 188 ದೇಶಗಳಲ್ಲಿ ಭಾರತ 130ನೇ ಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿ ಬಹಳ ಹಿಂದೆ ಇದ್ದರೂ ಕಳೆದ ವರ್ಷ ಇದ್ದ 135ನೇ ಸ್ಥಾನಕ್ಕೆ ಹೋಲಿಸಿದರೆ ಐದು ಸ್ಥಾನ ಏರಿಕೆ ಕಂಡಿದೆ. ನಾರ್ವೆ, ಆಸ್ಟ್ರೇಲಿಯಾ ಮತ್ತು ಸ್ವಿಜರ್‍ಲೆಂಡ್ ಈ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನಗಳನ್ನು ಆಕ್ರಮಿಸಿವೆ. 2014ರಲ್ಲಿ ಭಾರತದ ಮಾನವ ಅಭಿವೃದ್ಧಿ ಸೂಚ್ಯಂಕ (ಎಚ್‍ಡಿಐ) ಮೌಲ್ಯ 0.609 ಅಂಕಗಳಿವೆ. 1980ರಿಂದ 2014ರ ನಡುವೆ ಭಾರತದ ಎಚ್‍ಡಿಐ ಮೌಲ್ಯ 0.362ರಿಂದ 0.609ಕ್ಕೆ ಏರಿಕೆ ಕಂಡಿದೆ. ಅಂದರೆ ಸರಾಸರಿ ವಾರ್ಷಿಕ ಶೇ.68.1ರಷ್ಟು ಏರಿಕೆ ಕಂಡಿದೆ ಎಂದು ವಿಶ್ವಸಂಸ್ಥೆಯ ವರದಿ ಹೇಳಿದೆ. ಭಾರತದ ನೆರೆ ದೇಶಗಳಾದ ಬಾಂಗ್ಲಾದೇಶ 142 ಮತ್ತು ಪಾಕಿಸ್ತಾನ 147ನೇ ಸ್ಥಾನದಲ್ಲಿವೆ. ಬ್ರಿಕ್ಸ್ ದೇಶಗಳ ಸಾಲಿನಲ್ಲಿ ಭಾರತ ಅಗ್ರಸ್ಥಾನದಲ್ಲಿದೆ. ಭಾರತದಲ್ಲಿ 1980ರಲ್ಲಿ ಸರಾಸರಿ ಜೀವಿತಾವಧಿ 53.9ವರ್ಷಗಳಿದ್ದರೆ 2014ರಲ್ಲಿ 67.6 ವರ್ಷಕ್ಕೇರಿದೆ. ತಲಾದಾಯ 2013ರಲ್ಲಿ 5,180 ಡಾಲರ್ ಇದ್ದದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com