ಬಿಹಾರ, ಜಾರ್ಖಂಡ್ ನ ಕೆಲವು ಪ್ರದೇಶಗಳಲ್ಲಿ ಲಘು ಭೂಕಂಪ

ಬಿಹಾರ ಮತ್ತು ಜಾರ್ಖಂಡ್ ನ ಕೆಲವು ಪ್ರದೇಶಗಳಲ್ಲಿ ಮಂಗಳವಾರ ಬೆಳಗ್ಗೆ ಭೂಕಂಪಿಸಿದ ಅನುಭವವಾಗಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಪಾಟ್ನಾ: ಬಿಹಾರ ಮತ್ತು ಜಾರ್ಖಂಡ್ ನ ಕೆಲವು ಪ್ರದೇಶಗಳಲ್ಲಿ ಮಂಗಳವಾರ ಬೆಳಗ್ಗೆ ಭೂಕಂಪಿಸಿದ ಅನುಭವವಾಗಿದೆ. 
ಇಂದು ಬೆಳಿಗ್ಗೆ ಸುಮಾರು 8.5ಕ್ಕೆ ಭೂಕಂಪನವಾಗಿದೆ. 10 ಸೆಕೆಂಡುಗಳವರೆಗೆ ಭೂಮಿ ನಡುಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ. 
ಭಯದಿಂದ ಕಟ್ಟಡಗಳಲಿದ್ದ ನಾಗರಿಕರು ಹೊರಗಡೆ ಓಡಿ ಬಂದಿದ್ದಾರೆ. ಈವರೆಗೆ ಯಾವುದೇ ಹಾನಿ ವರದಿಯಾಗಿಲ್ಲ. 
ಡಿಸೆಂಬರ್ 7ರಂದು ತಜಕಿಸ್ತಾನದಲ್ಲಿ ಉಂಟಾದ ರಿಕ್ಟರ್ ಮಾಪಕದಲ್ಲಿ 7.6 ತೀವ್ರತೆಯ ಭೂಕಂಪನದಿಂದಾಗಿ ದೆಹಲಿ, ಕಾಶ್ಮೀರ, ಪಂಜಾಬ್ ಹಲವು ಭಾಗಗಳಲ್ಲಿ ಭೂಮಿ ನಡುಗಿತ್ತು. ಇದರ ಬೆನ್ನಲ್ಲೇ, ಈಗ ಬಿಹಾರ ಮತ್ತು ಜಾರ್ಖಂಡ್ ನಲ್ಲಿ ಭೂಕಂಪಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com