ಆರೋಗ್ಯವಂತ ಅತ್ತೆ ಮಾರಾಟಕ್ಕಿದ್ದಾಳೆ: ಆನ್ ಲೈನ್ ನಲ್ಲಿ ಜಾಹೀರಾತು ಹಾಕಿದ ಸೊಸೆ

ಕೋಪಗೊಂಡ ಸೊಸೆ , ಆರೋಗ್ಯವಂತ, ಉತ್ತಮ ಸ್ಥಿತಿಯಲ್ಲಿರುವ ಅತ್ತೆ ಮಾರಾಟಕಿದ್ದಾರೆ ಎಂದು ಆನ್ ಲೈನ್ ನಲ್ಲಿ ಜಾಹೀರಾತು ನೀಡಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ. ...
ಸೊಸೆ ನೀಡಿರುವ ಜಾಹೀರಾತು
ಸೊಸೆ ನೀಡಿರುವ ಜಾಹೀರಾತು

ನವದೆಹಲಿ: ಆನ್ ಲೈನ್ ನಲ್ಲಿ ಬಟ್ಟೆ, ಪುಸ್ತಕ ಸೇರಿದಂತೆ ಹಲವು ವಸ್ತುಗಳ ಮಾರಾಟಕ್ಕೆ ಅವಕಾಶವಿದೆ. ಜೊತೆಗೆ ಮಾರಾಟದ ಆಫರ್, ಡಿಸ್ಕೌಂಟ್ ಕೂಡ ಹಾಕುತ್ತಾರೆ.

ಆದರೆ ಇಲ್ಲೊಬ್ಬ ಕೋಪಗೊಂಡ ಸೊಸೆ , ಆರೋಗ್ಯವಂತ, ಉತ್ತಮ ಸ್ಥಿತಿಯಲ್ಲಿರುವ ಅತ್ತೆ ಮಾರಾಟಕಿದ್ದಾರೆ ಎಂದು ಆನ್ ಲೈನ್ ನಲ್ಲಿ ಜಾಹೀರಾತು ನೀಡಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ.

ಕಳೆದ ತಿಂಗಳು ಫೈದಾ.ಕಾಮ್ ನಲ್ಲಿ ಮಾನಸಿಕ ಶಾಂತಿಗಾಗಿ ಪುಸ್ತಕ ಬದಲಾವಣೆ ಎಂಬ ಸೈಟ್ ನಲ್ಲಿ ಈ ಪೋಸ್ಟ್ ಹಾಕಿದ್ದಾರೆ.

ಜಾಹೀರಾತಿನ ಕೆಳಗೆ ಸಣ್ಣ ವಿವರಣೆ ಕೂಡ ನೀಡಿದ್ದಾರೆ. ಅತ್ತೆಗೆ 60 ವರ್ಷ. ತುಂಬಾ ಸಿಹಿಯಾದ ಧ್ವನಿ, ಈ ಧ್ವನಿಯಿಂದ ನಿಮ್ಮ ನೆರೆಹೊರೆಯವರನ್ನು ಸುಲಭವಾಗಿ ಕೊಲ್ಲಬಹುದು. ಅತ್ಯುತ್ತಮ ಆಹಾರ ವಿಮರ್ಶಕಿ. ಯಾವುದೇ ಆಹಾರವನ್ನು ನೀವು ತುಂಬಾ ಚೆನ್ನಾಗಿ ತಯಾರಿಸಲು ಸಾಧ್ಯವಿಲ್ಲ. ಜೊತೆಗೆ ಬಹುದೊಡ್ಡ ಸಲಹಗಾರ್ತಿಯೂ ಕೂಡ. ಎಂದು ಜಾಹೀರಾತಿನ ಕೆಳಗೆ ವಿವರಣೆ ನೀಡಲಾಗಿದೆ.

ಈ ವಿವಾದಾತ್ಮಕ ಪೋಸ್ಟ್ ಅಪ್ ಲೋಡ್ ಆದ 10 ನಿಮಿಷದಲ್ಲೇ  ಪೋಸ್ಟ್ ಅನ್ನು ಕಿತ್ತು ಹಾಕಲಾಗಿದೆ. ಇಂಥಹ ವಿವಾದಾತ್ಮಕ ಪೋಸ್ಟ್ ಗಳು ನಮ್ಮ ಗಮನಕ್ಕೆ ಕೂಡಲೇ  ತೆಗೆದು ಹಾಕುತ್ತೇವೆ ಎಂದು  ಫೈದಾ.ಕಾಮ್ ನ ಸಹ ಸಂಸ್ಥಾಪಕ ವಿಪುಲ್ ಪಲಿವಾಲ್ ತಿಳಿಸಿದ್ದಾರೆ.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com