ಪ್ರಧಾನಿ ಹುದ್ದೆಗೆ ನಾನು ಸೂಕ್ತ ವ್ಯಕ್ತಿ: ಅಜಂಖಾನ್

ದೇಶದ ಪ್ರಧಾನಮಂತ್ರಿ ಹುದ್ದೆಗೆ ನಾನು ಸೂಕ್ತ ವ್ಯಕ್ತಿ ಎಂದು ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಮಂಗಳವಾರ ಹೇಳಿದ್ದಾರೆ...
ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಅಜಂ ಖಾನ್ (ಸಂಗ್ರಹ ಚಿತ್ರ)
ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಅಜಂ ಖಾನ್ (ಸಂಗ್ರಹ ಚಿತ್ರ)
Updated on: 

ಕಾನ್ಪುರ: ದೇಶದ ಪ್ರಧಾನಮಂತ್ರಿ ಹುದ್ದೆಗೆ ನಾನು ಸೂಕ್ತ ವ್ಯಕ್ತಿ ಎಂದು ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಮಂಗಳವಾರ ಹೇಳಿದ್ದಾರೆ.

ಈ ಕುರಿತಂತೆ ಮಾಧ್ಯಮಗಳ ವರದಿಗಾರರೊಂದಿಗೆ ಮಾತನಾಡಿರುವ ಅವರು, ದೇಶದ ಪ್ರಧಾನಮಂತ್ರಿಯಾಗುವ ಬಯಕೆ ನನಗೆ ಇದೆ. ನಾನು ಆ ಹುದ್ದೆ ಸೂಕ್ತ ವ್ಯಕ್ತಿಯಾಗಿದ್ದೇನೆ. ಒಂದು ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಜೀನಾಮೆ ನೀಡಿದ್ದೇ ಆದರೆ ಮತ್ತು ಎಲ್ಲ ಸಂಸದರು ನನ್ನನ್ನು ಪ್ರಧಾನಿ ಹುದ್ದೆಗೆ ಆಯ್ಕೆ ಮಾಡಿದರೆ, ದೇಶಕ್ಕೆ ಉತ್ತಮ ಸಂದೇಶ ರವಾನಿಸಿದಂತಾಗುತ್ತದೆ. ಅಲ್ಲದೆ, ದೇಶವೂ ಕೂಡ ಅಭಿವೃದ್ಧಿ ಪಥದತ್ತ ಸಾಗುತ್ತದೆ ಎಂದು ಹೇಳಿದ್ದಾರೆ.

ವಿಶ್ವದ ಟಾಪ್ 10 ಅಪರಾಧಿಗಳ ಪಟ್ಟಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹೆಸರಿದೆ. ಇದನ್ನು ನಾನು ಹೇಳುತ್ತಿಲ್ಲ. ಬೇಕಿದ್ದರೆ ಗೂಗಲ್ ನಲ್ಲಿರುವ ವಿಶ್ವದ ಟಾಪ್ 10 ಅಪರಾಧಿಗಳ ಪಟ್ಟಿಯನ್ನು ನೀವು ನೋಡಬಹುದು. ಮೋದಿಯಂತವರೇ ಪ್ರಧಾನಿಯಾದ ಮೇಲೆ ನಾನೇಕೆ ಪ್ರಧಾನಮಂತ್ರಿಯಾಗಬಾರದು. ಪ್ರಧಾನಿ ಹುದ್ದೆಗೆ ನಾನು ಸೂಕ್ತ ವ್ಯಕ್ತಿಯಾಗಿದ್ದೇನೆ.

ಪ್ರಧಾನಿ ಹುದ್ದೆಗೆ ಸೂಕ್ತ ವ್ಯಕ್ತಿ ಯಾರೆಂಬುದರ ಬಗ್ಗೆ ಚರ್ಚೆಗಳು ಆರಂಭವಾದರೆ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಅವರು ನನನ್ನು ಸೂಚಿಸುತ್ತಾರೆ. ಬೆಂಬಲ ನೀಡುತ್ತಾರೆ ಎಂದು ಹೇಳಿದ್ದಾರೆ.

ಇದೇ ವೇಳೆ ನಿಮಗೆ ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಒತ್ತಾಯಿಸಿ ನಗರದೆಲ್ಲೆಡೆ ಭಿತ್ತಿಪತ್ರಗಳು ಹರಿದಾಡುತ್ತಿವೆಯಲ್ಲ ಎಂಬ ಪ್ರಶ್ನೆಗೆ ಉತ್ತರ ನೀಡಿರುವ ಅವರು, ನೀವು ನನಗೆ ಅವಮಾನ ಮಾಡುತ್ತಿದ್ದೀರಿ. ನನಗೆ ಪ್ರಧಾನಮಂತ್ರಿಯಾಗುವ ಇಚ್ಛೆಯಿದೆ. ಆ ಹುದ್ದೆಗೆ ನಾನು ಸೂಕ್ತ ವ್ಯಕ್ತಿಯಾಗಿದ್ದೇನೆ. ಹಾಗಾಗಿಯೇ ಉಪಮುಖ್ಯಮಂತ್ರಿ ಮಾಡುವಂತೆ ಒತ್ತಾಯಿಸಿರುವ ಆ ಭಿತ್ತಿಪತ್ರಗಳನ್ನು ನಾನೇ ತೆಗೆಸುತ್ತಿದ್ದೇನೆಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com