ಹೈದರಾಬಾದ್ ನಲ್ಲಿ ಗೂಗಲ್ ಕ್ಯಾಂಪಸ್ ನಿರ್ಮಾಣ: ಸುಂದರ್ ಪಿಚ್ಚೈ

ಹೈದಾರಾಬಾದ್ ನಲ್ಲಿ ಗೂಗಲ್ ನ ಹೊಸ ಕ್ಯಾಂಪಸ್ ನಿರ್ಮಾಣವಾಗಲಿದ್ದು ಭಾರತದಲ್ಲಿ ಅತಿ ಹೆಚ್ಚು ಜನರು ಇಂಟರ್ ನೆಟ್ ಬಳಕೆ ಮಾಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಿದೆ ಎಂದು ಹೇಳಿದ್ದಾರೆ.
ಸುಂದರ್ ಪಿಚ್ಚೈ
ಸುಂದರ್ ಪಿಚ್ಚೈ

ನವದೆಹಲಿ: ಗೂಗಲ್ ಸಿಇಒ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಪ್ರಥಮ ಬಾರಿ ಭಾರತಕ್ಕೆ ಭೇಟಿ ನೀಡಿರುವ ಸುಂದರ್ ಪಿಚ್ಚೈ ಹೈದಾರಾಬಾದ್ ನಲ್ಲಿ ಗೂಗಲ್ ನ ಹೊಸ ಕ್ಯಾಂಪಸ್ ನಿರ್ಮಾಣವಾಗಲಿದ್ದು ಭಾರತದಲ್ಲಿ ಅತಿ ಹೆಚ್ಚು ಜನರು ಇಂಟರ್ ನೆಟ್ ಬಳಕೆ ಮಾಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಿದೆ ಎಂದು ಹೇಳಿದ್ದಾರೆ.
ನವದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಸುಂದರ್ ಪಿಚ್ಚೈ, ರೈಲ್ ಟೆಲ್ ನೊಂದಿಗೆ ಭಾರತದ 400 ರೈಲ್ವೆ ನಿಲ್ದಾಣಗಳಲ್ಲಿ ವೈಫೈ ಸಂಪರ್ಕ ಕಲ್ಪಿಸಲು ನಿರ್ಧರಿಸಲಾಗಿದೆ. 2016 ಅಂತ್ಯಕ್ಕೆ ಭಾರತದ 100 ರೈಲು ನಿಲ್ದಾಣಗಳು ವೈಫೈ ಸಂಪರ್ಕ ಪಡೆಯಲಿವೆ, ಜನವರಿ ವೇಳೆಗೆ ಮುಂಬೈ ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ವೈಫೈ ಸಂಪರ್ಕ ದೊರೆಯಲಿದೆ ಎಂದು ಪಿಚ್ಚೈ  ತಿಳಿಸಿದ್ದಾರೆ.
ರೈಲ್ವೆ ನಿಲ್ದಾಣಗಳಲ್ಲಿ ವೈಫೈ ಸೌಲಭ್ಯ ಕಲ್ಪಿಸುವುದು ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಾಗೆ ಭೇಟಿ ನೀಡಿದ ವೇಳೆಯಲ್ಲಿ ಗೂಗಲ್ ನೀಡಿದ ಭರವಸೆ ಇದಾಗಿದೆ. ಭಾರತದಲ್ಲಿ ಗೂಗಲ್ ಉದ್ಯಮವನ್ನು  ವಿಸರಿಸುವ ಬಗ್ಗೆ ಮಾತನಾಡಿರುವ ಸುಂದರ್ ಪಿಚ್ಚೈ, ಹೂಡಿಕೆಯನ್ನು ಬೆಂಗಳೂರು  ಹಾಗೂ ಹೈದರಾಬಾದ್ ಗಳಲ್ಲಿ ಹೆಚ್ಚಿಸಿ, ಹೈದರಾಬಾದ್ ನಲ್ಲಿ ಗೂಗಲ್ ನ ಕ್ಯಾಂಪಸ್ ನಿರ್ಮಾಣವಾಗಲಿದೆ ಎಂದು ಹೇಳಿದ್ದಾರೆ. ಆದರೆ ಕ್ಯಾಂಪಸ್ ನಿರ್ಮಾಣದ ಹೂಡಿಕೆಯ ಮೊತ್ತದ ಬಗ್ಗೆ ನಿಖರ ಮಾಹಿತಿ ನೀಡಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com