
ಚಂಡೀಗಢ: ಮದ್ಯ ಮಾದಕ ದ್ರವ್ಯವಲ್ಲ ಎಂದು ಪಂಜಾಬ್ ಆರೋಗ್ಯ ಸಚಿವ ಸುರ್ಜಿತ್ ಕುಮಾರ್ ಜ್ಯಾನಿ ಮಂಗಳವಾರ ಹೇಳಿದ್ದಾರೆ.
ಬಾದಲ್ ನಲ್ಲಿ ಮದ್ಯ ವ್ಯಸನ ಮುಕ್ತಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿರುವ ಅವರು, ಮದ್ಯ ಮಾದಕ ದ್ರವ್ಯವಲ್ಲ. ಮದ್ಯವನ್ನು ಮಾದಕ ದ್ರವ್ಯವೆಂದು ಕರೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಮದ್ಯ ಮಾದಕ ದ್ರವ್ಯವಲ್ಲವಾದ್ದರಿಂದ ಅದನ್ನು ಯೋಧರು ಹಾಗೂ ಪಾರ್ಟಿಗಳಲ್ಲಿ ಬಳಸಲಾಗುತ್ತಿದೆ. ಸರ್ಕಾರ ಕೂಡ ಮದ್ಯ ತಯಾರಿಕೆಗೆ ಅನುಮತಿ ನೀಡಿದೆ. ಮದ್ಯವನ್ನು ಅಂಗಡಿಗಳಿಗೆ ಹರಾಜು ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ಮದ್ಯ ವ್ಯಸನ ಸಮಸ್ಯೆ ಪಂಜಾಬ್ ನಲ್ಲಿ ತರೆದೋರುತ್ತಿದ್ದು, ವ್ಯಸನಿಗಳ ಸಂಖ್ಯೆ ಪಂಜಾಬ್ ನಲ್ಲಿ ಹೆಚ್ಚಾಗಿದೆ. ಈ ಸಂಬಂಧ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಹೇಳಿಕೆ ನೀಡಿದ್ದರು. ಪ್ರತಿ 10 ಯುವಕರಲ್ಲಿ 7 ಜನರು ಮದ್ಯ ವ್ಯಸನಿಗಳಾಗಿರುತ್ತಾರೆಂದು ಹೇಳಿದ್ದರು.
Advertisement