ನಾಪತ್ತೆಯಾಗಿದ್ದ ಭಾರತದ ಪುರಾತನ ಗ್ರಂಥ ಅಮೆರಿಕದ ಮ್ಯೂಸಿಯಂನಲ್ಲಿ ಪತ್ತೆ

17ನೇ ಶತಮಾನದಲ್ಲಿ ರಚಿಸಲಾಗಿದೆ ಎಂದು ಹೇಳಲ್ಪಡುವ ಇಲ್ಲಿಯವರೆಗೆ ನಾಪತ್ತೆಯಾಗಿದ್ದ ಭಾರತೀಯ ಪುರಾತನ ಗ್ರಂಥವೊಂದರ ಹಸ್ತಪ್ರತಿ ಅಮೆರಿಕದ...
ಪುರಾತನ ಗ್ರಂಥವೊಂದರ ಹಸ್ತಪ್ರತಿ (ಕೃಪೆ :ಫೇಸ್ ಬುಕ್ )
ಪುರಾತನ ಗ್ರಂಥವೊಂದರ ಹಸ್ತಪ್ರತಿ (ಕೃಪೆ :ಫೇಸ್ ಬುಕ್ )
ನಾಗ್ಪುರ: 17ನೇ ಶತಮಾನದಲ್ಲಿ ರಚಿಸಲಾಗಿದೆ ಎಂದು ಹೇಳಲ್ಪಡುವ ಇಲ್ಲಿಯವರೆಗೆ ನಾಪತ್ತೆಯಾಗಿದ್ದ ಭಾರತೀಯ ಪುರಾತನ ಗ್ರಂಥವೊಂದರ ಹಸ್ತಪ್ರತಿ ಅಮೆರಿಕದ ವೆರ್ಜಿನಿಯಾ ಮ್ಯೂಸಿಯಂನಲ್ಲಿ ಪತ್ತೆಯಾಗಿದೆ.  ನಾಗಪುರದಲ್ಲಿ ರಚಿಸಲ್ಪಟ್ಟ ದ್ಯಾನೇಶ್ವರಿ ಎಂಬ ಗ್ರಂಥದ ಹಸ್ತಪ್ರತಿಯಾಗಿದೆ ಇದು. ಈ ಗ್ರಂಥದ ಹಸ್ತಪ್ರತಿ ನಾಪತ್ತೆಯಾಗಿರುವುದು ನಾಗ್ಪುರದ ಸಾಹಿತ್ಯಕಾರರಿಗೂ, ಚಿಂತಕರಿಗೂ ತಿಳಿದಿರಲಿಲ್ಲ. 
ಅಮೆರಿಕದ ಅಲಬಾಮಾ ವಿವಿಯ ಅಸೋಸಿಯೇಟ್ ಪ್ರೊಫೆಸರ್ ಕ್ಯಾತ್ಲಿನ್  ಕಮ್ಮಿಂಗ್‌ಸಾನ್ ಎಂಬವರು ಸಂಶೋಧನೆ ಮಾಡುತ್ತಿರುವಾಗ ವರ್ಜೀನಿಯಾ ಮ್ಯೂಸಿಯಂನಲ್ಲಿ ಈ ಪಪುರಾತನ ಹಸ್ತ ಪ್ರತಿಯನ್ನು ಪತ್ತೆ ಹಚ್ಚಿದ್ದಾರೆ. ತಕ್ಷಣ ಅವರು ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಕಾರ್ಪರೇಷನ್‌ನ ಮಾಜಿ ಅಧಿಕಾರಿ ಶೇಷಯನ್ ದೇಶ್‌ಮುಖ್ ಜತೆ ಫೋನಲ್ಲಿ ಮಾತನಾಡಿ ವಿಷಯ ತಿಳಿಸಿದ್ದಾರೆ. ಆಮೇಲೆ ಈ ಗ್ರಂಥದ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಕ್ಯಾತ್ಲಿನ್ ನಾಗ್ಪುರ್‌ಗೆ ಬಂದಿದ್ದಾರೆ. ಹಸ್ತಪ್ರತಿಯನ್ನು ನೋಡಿದ ಸಂಶೋಧಕು ಇದು ಭಾರತದಲ್ಲೇ ರಚಿಸಲ್ಪಟ್ಟ ಗ್ರಂಥ ಎಂದು ಹೇಳಿದ್ದಾರೆ.
ಕ್ರಿಸ್ತಶಕ 1685ರಲ್ಲಿ ಇದು ರಚಿಸಲ್ಪಟ್ಟಿದ್ದು, 1986ರಲ್ಲಿ ಇದು ನಾಪತ್ತೆಯಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com