ಬರಗಾಲವಿದ್ದರೂ ರು. 7 ಕೋಟಿ ಖರ್ಚು ಮಾಡಿ ತೆಲಂಗಾಣ ಸಿಎಂನಿಂದ ಯಾಗ

ತೆಲಂಗಾಣದಲ್ಲಿ ಕೃಷಿ ನಾಶ ಸಂಭವಿಸಿ ಜನರು ಹಸಿವಿನಿಂದ ಕಂಗೆಟ್ಟಿದ್ದರೂ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ರು. 7 ಕೋಟಿ ...
ಚಂದ್ರಶೇಖರ್ ರಾವ್
ಚಂದ್ರಶೇಖರ್ ರಾವ್
ಹೈದ್ರಾಬಾದ್: ತೆಲಂಗಾಣದಲ್ಲಿ ಕೃಷಿ ನಾಶ ಸಂಭವಿಸಿ ಜನರು ಹಸಿವಿನಿಂದ ಕಂಗೆಟ್ಟಿದ್ದರೂ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ರು. 7 ಕೋಟಿ ವ್ಯಯಿಸಿ ಯಾಗ ಮಾಡುತ್ತಿದ್ದಾರೆ.
ಮೇಡಕ್ ಜಿಲ್ಲೆಯ ಎರವೆಳ್ಳಿಯಲ್ಲಿರುವ ಮುಖ್ಯಮಂತ್ರಿಯವರ ಫಾರ್ಮ್‌ಹೌಸ್ ನಲ್ಲಿ ಈ ಯಾಗ ನಡೆಯುತ್ತಿದೆ. ಈ ಯಾಗಕ್ಕೆ ರು. 7 ಕೋಟಿಯನ್ನು ವ್ಯಯಿಸುತ್ತಿದ್ದು, ಇದು ಸರ್ಕಾರದ ದುಡ್ಡಲ್ಲ ಎಂದು ಮುಖ್ಯಮಂತ್ರಿ ಹೇಳಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.
ಈ ಯಾಗದಲ್ಲಿ  1500 ಪೂಜಾರಿಗಳು ಭಾಗವಹಿಸುತ್ತಿದ್ದು, ರಾಷ್ಟ್ರಪತಿ  ಪ್ರಣಬ್ ಮುಖರ್ಜಿ ಕೂಡಾ ಯಾಗದಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಒಟ್ಟು 50,00 ಮಂದಿ ಈ ಯಾಗದಲ್ಲಿ ಪಾಲ್ಗೊಳ್ಳಲಿದ್ದಾರೆ.
ಎಲ್ಲೆಡೆ ಟೀಕೆ: ರಾಜ್ಯದಲಿ  ಕೃಷಿ ನಾಶ ಸಂಭವಿಸಿ ಕಂಗೆಟ್ಟಿರುವಾಗ ಮುಖ್ಯಮಂತ್ರಿಯವರು ಯಾಗ ನಡೆಸುವುದನ್ನು ಕೃಷಿಕರು ಟೀಕಿಸಿದ್ದಾರೆ.
ಈ ಹಿಂದೆ ಚಂದ್ರಶೇಖರ ರಾವ್ ರು. 5 ಕೋಟಿ ಬಸ್ ಖರೀದಿಸಿದ್ದು ವಿವಾದವಾಗಿತ್ತು. ಬೆಡ್ ರೂಂ, ರೆಸ್ಟ್ ರೂಂ, ಮೀಟಿಂಗ್ ಹಾಲ್, ಇಂಟರ್‌ನೆಟ್ ಸೌಲಭ್ಯ ಮೊದಲಾದ ಸೌಕರ್ಯವಿರುವ ಬುಲೆಟ್ ಪ್ರೂಫ್ ಬಸ್ ನ್ನು ಸರ್ಕಾರ ಮುಖ್ಯಮಂತ್ರಿಯವರಿಗಾಗಿ ಖರೀದಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com