ತಿಂಗಳಲ್ಲಿ ರು.6.31ಲಕ್ಷ ಕೋಟಿ

ಯುಪಿಎ ಸರ್ಕಾರಕ್ಕೆ ಅಂಟಿಕೊಂಡಿದ್ದ ನೀತಿ ಗ್ರಹಣ'ವನ್ನು ಸರಿಪಡಿಸುವ ನಿಟ್ಟಿನಲ್ಲಿ ಮೋದಿ ಸರ್ಕಾರ...
ತಿಂಗಳಲ್ಲಿ ರು.6.31ಲಕ್ಷ ಕೋಟಿ

ನವದೆಹಲಿ: ಯುಪಿಎ ಸರ್ಕಾರಕ್ಕೆ ಅಂಟಿಕೊಂಡಿದ್ದ ನೀತಿ ಗ್ರಹಣ'ವನ್ನು ಸರಿಪಡಿಸುವ ನಿಟ್ಟಿನಲ್ಲಿ ಮೋದಿ ಸರ್ಕಾರ ಹೆಜ್ಜೆಯಿಡುತ್ತಿದೆ. 2014ರ ಜೂನ್‍ನಿಂದ ಡಿಸೆಂಬರ್‍ವರೆಗಿನ ಅವಧಿಯಲ್ಲಿ ಕೇಂದ್ರ ಸರ್ಕಾರವು ಬರೋಬ್ಬರಿ ರು. 6.31 ಲಕ್ಷ ಕೋಟಿ ಮೌಲ್ಯದ 190 ಯೋಜನೆಗಳಿಗೆ ಪರಿಸರ ಅನುಮತಿ ನೀಡಿರುವುದೇ ಇದಕ್ಕೆ ಸಾಕ್ಷಿ.

ಯೋಜನೆಗಳಿಗೆ ಅನುಮತಿ ನೀಡುವ ಮೂಲಕ ಕೈಗಾರಿಕಾ ಚಟುವಟಿಕೆಗಳನ್ನು ತ್ವರಿತಗೊಳಿಸಿ ದೇಶದ ಅಭಿವೃದ್ಧಿಯ  ಕನಸನ್ನು ಈಡೇರಿಸುವುದು ಸರ್ಕಾರದ ಬಯಕೆಯಾಗಿದೆ. ಈ ಹಿನ್ನೆಲೆಯಲ್ಲಿ ಖಾಸಗಿ ಮತ್ತು ಸರ್ಕಾರಿ ಸ್ವಾಮ್ಯದ ಕಂಪನಿಗಳ ಹಲವು ಯೋಜನೆಗಳಿಗೆ ಒಪ್ಪಿಗೆ ನೀಡಲಾಗಿದೆ.

ಒಟ್ಟು ಯೋಜನೆಗಳ ಪೈಕಿ ಪರಿಸರ ಸಚಿವಾಲಯವು 37 ಕಲ್ಲಿದ್ದಲೇಶರ ಗಣಿ ಯೋಜನೆಗಳು, 45 ಮೂಲಸೌಕರ್ಯ ಯೋಜನೆಗಳು ಮತ್ತು 69 ಕೈಗಾರಿಕಾ ಯೋಜನೆಗಳಿಗೆ ಹಸಿರುನಿಶಾನೆ ತೋರಿದೆ. ಅಷ್ಟೇ ಅಲ್ಲದೆ, ಮೋದಿ ಸರ್ಕಾರ ಅ„ಕಾರಕ್ಕೇರಿದ ಬಳಿಕ ಈವರೆಗೆ ರು. 38 ಸಾವಿರ ಕೋಟಿ ವೆಚ್ಚದ 10 ಉಷ್ಣವಿದ್ಯುತ್ ಯೋಜನೆಗಳು, ರು.8,900 ಕೋಟಿ ವೆಚ್ಚದ 25 ಕಲ್ಲಿದ್ದಲು ಗಣಿ ಯೋಜನೆಗಳು, ಒಂದು ನದಿ ಕಣಿವೆ ಯೋಜನೆಗೆ ಒಪ್ಪಿಗೆ ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com