ದೆಹಲಿ ಚುನಾವಣೆ: ಎಎಪಿ 37, ಬಿಜೆಪಿ 29, ಕಾಂಗ್ರೆಸ್ 4 ಸೀಟು

ಸಮೀಕ್ಷೆ
ಸಮೀಕ್ಷೆ

ನವದೆಹಲಿ: ಕಳೆದ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಕಾಂಗ್ರೆಸ್‌ನ ಬೇಷರತ್ತು ಬೆಂಬಲದೊಂದಿಗೆ ಸರ್ಕಾರ ರಚಿಸಿದ್ದ ಆಮ್ ಆದ್ಮಿ ಪಕ್ಷ(ಆಪ್)ದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಮುಖ್ಯಮಂತ್ರಿಯಾಗಿ ಕೇವಲ 49 ದಿನಗಳೊಳಗೆ ರಾಜಿನಾಮೆ ನೀಡಿ ಜನರ ನಂಬಿಕೆಗೆ ಅಪಮಾನ ಮಾಡಿದ್ದರು ಸಹ ಪ್ರಸ್ತುತ ಸಮೀಕ್ಷೆಗಳನ್ನು ಗಮನಿಸಿದರೆ ತಮ್ಮ ಚಾರ್ಮ್‌ನ್ನು ಹಾಗೇ ಉಳಿಸಿಕೊಂಡಿದ್ದಾರೆ.

ಕೇಜ್ರಿವಾಲ್ ರಾಜಿನಾಮೆ ಬಳಿಕ ರಾಷ್ಟ್ರಪತಿ ಆಡಳಿತ ಜಾರಿಗೆ ಇದೀಗ ಮತ್ತೆ ಚುನಾವಣೆ ನಡೆಯುತ್ತಿದೆ. ಈ ಸಂಬಂಧ ಹಲವಾರು ಖಾಸಗಿ ಚಾನೆಲ್‌ಗಳು ಸಮೀಕ್ಷೆಗಳನ್ನು ನಡೆಸಿವೆ. ಅದರಂತೆ ಎನ್‌ಡಿಟಿವಿ ನಡೆಸಿರುವ ಜನಾಭಿಪ್ರಾಯ ಸಂಗ್ರಹಣೆಯಲ್ಲಿ ತಮ್ಮ ಕ್ರೇಜ್ ಕಳೆದುಕೊಳ್ಳದ ಆಪ್ ಪಕ್ಷ 37 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ 31 ಸ್ಥಾನಗಳನ್ನು ಗಳಿಸಿ ಪ್ರಥಮ ಸ್ಥಾನಗಳಿಸಿದ್ದ ಬಿಜೆಪಿಗೆ ಈ ಬಾರಿ 29 ಸ್ಥಾನಗಳು ಲಭಿಸಲಿದೆ ಎಂದು ಸಮೀಕ್ಷೆ ಹೇಳಿದೆ. ಅದರಂತೆ ಕಳೆದ ಬಾರಿಯಂತೆ ಈ ಬಾರಿಯು ಕಾಂಗ್ರೆಸ್‌ಗೆ ಬಾರಿ ಹಿನ್ನೆಡೆಯಾಗಲಿದ್ದು, 4 ಸ್ಥಾನಗಳನ್ನು ಮಾತ್ರ ಗಳಿಸಲಿದೆ ಎಂದು ವರದಿ ಹೇಳಿದೆ.

ಹಿಂದುಸ್ಥಾನ ಟೈಮ್ಸ್, ಎಕಾನಾಮಿಕ್ ಟೈಮ್ಸ್, ಮತ್ತು ಎಬಿಪಿ ನ್ಯೂಸ್ ಚಾನಲ್‌ಗಳು ನಡೆಸಿದ ಸಮೀಕ್ಷೆಗಳ ಪ್ರಕಾರ ಎನ್‌ಡಿಟಿವಿ ಈ ಸಮೀಕ್ಷೆಯನ್ನು ಬಿಡುಗಡೆ ಮಾಡಿದೆ.

ಫೆಬ್ರವರಿ 7 ರಂದು ಮತದಾನ ನಡೆಯಲಿದ್ದು, 10 ರಂದು ಮತ ಎಣಿಕೆ ನಡೆಯಲಿದೆ. ಕಣದಲ್ಲಿ ಬಿಜೆಪಿಯಿಂದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಿರಣ್ ಬೇಡಿ, ಆಪ್ ಸಿಎಂ ಅಭ್ಯರ್ಥಿಯಾಗಿ ಅರವಿಂದ್ ಕೇಜ್ರಿವಾಲ್ ನಡುವೆ ನೇರ ಹಣಾಹಣಿ ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com