ರಾಜ್ಯಗಳು ಗುಜರಾತ್ ಮಾದರಿ ಅನುಸರಿಸಲಿ: ಅರ್ನಾಲ್ಡ್
ನವದೆಹಲಿ: ಭಾರತದ ಎಲ್ಲ ರಾಜ್ಯ ಸರ್ಕಾರಗಳು ನರೇಂದ್ರ ಮೋದಿ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಗುಜರಾತ್‌ನಲ್ಲಿ ಮಾಡಿದ ಅಭಿವೃದ್ಧಿ ಮಾದರಿಯನ್ನು ಅನುಸರಿಸಬೇಕು ಎಂದು ಖ್ಯಾತ ಹಾಲಿವುಡ್ ನಟ, ಕ್ಯಾಲಿಪೋರ್ನಿಯಾದ ಮಾಜಿ ಗವರ್ನರ್ ಅರ್ನಾಲ್ಡ್ ಶ್ವಾರ್ಜೆನೆಗರ್ ಹೇಳಿದ್ದಾರೆ.
ಮೋದಿ ಕಾರ್ಯವಿಧಾನ ನನಗೆ ಮೆಚ್ಚುಗೆಯಾಗಿದೆ. ಅವರ ನೀತಿ, ದೂರದೃಷ್ಟಿ ಗುಜರಾತ್ ಅನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವುದರ ಜತೆಗೆ ರಾಜ್ಯವನ್ನು ಬಲಿಷ್ಠಗೊಳಿಸಿದೆ. ಹೀಗಾಗಿ ಗುಜರಾತ್ ಭಾರತದ ಕ್ಯಾಲಿಪೋರ್ನಿಯಾವಾಗಿದೆ. ಜತೆಗೆ ಇದರಲ್ಲಿ ಮೋದಿ ಅವರ ಉತ್ತಮ ಆಡಳಿತ ಇದೆ ಎಂಬುದು ನಿಸ್ಸಂಶಯ ಎಂದು ಹೇಳಿದ್ದಾರೆ.
ಟರ್ಮಿನೇಟರ್!: ಹವಾಮಾನ ಬದಲಾವಣೆಗೆ ನಾನೇ ಟರ್ಮಿನೇಟರ್ ಎಂದು ಹೇಳಿಕೊಂಡಿರುವ ಅರ್ನಾಲ್ಡ್, ಹವಾಮಾನ ಬದಲಾವಣೆಗೆ ತಡೆಹಾಕುವಲ್ಲಿ ಗುಜರಾತ್ ಮುಖ್ಯಪಾತ್ರವಹಿಸಿದೆ.
ಇದು ಗುಜರಾತ್‌ನ ಶಕ್ತಿಯನ್ನು ತೋರಿಸುತ್ತದೆ. ಹೀಗಾಗಿ ಇಳ್ಲಿ ಯಾವುದೇ ಯೋಜನೆಯನ್ನು ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರವನ್ನು ಕಾಯಬೇಕಾದ ಪರಿಸ್ಥಿತಿ ಬರುವುದಿಲ್ಲ ಎಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ