ಭಾರತದ ಧಾರ್ಮಿಕ ಅಸಹಿಷ್ಣುತೆ ಬಗ್ಗೆ ಒಬಾಮ ಅಸಮಾಧಾನ

ಭಾರತದ ವೈವಿಧ್ಯತೆಯಲ್ಲಿ ಏಕತೆಯನ್ನು ಕಂಡು ನಾನು ಮತ್ತು ಮಿಶೆಲ್ ಹಿಂದಿರುಗಿದೆವು. ಆದರೆ, ಅದೇ ಭಾರತದಲ್ಲಿ..
ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ (ಸಂಗ್ರಹ ಚಿತ್ರ)
ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ (ಸಂಗ್ರಹ ಚಿತ್ರ)
Updated on

ವಾಷಿಂಗ್ಟನ್: ಭಾರತದ ಧಾರ್ಮಿಕ ಅಸಹಿಷ್ಣುತೆ ಬಗ್ಗೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅಸಮಾಧಾನ ವ್ಯಕ್ತಪಡಿಸಿದ್ದು, ಪ್ರಸ್ತುತ ಭಾರತ ಪರಿಸ್ಥಿತಿಯನ್ನು ಗಾಂಧೀಜಿ ನೋಡಿರುತ್ತಿದ್ದರೆ ಖಂಡಿತ ಅವರಿಗೆ ಆಘಾತವಾಗುತ್ತಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

ಭಾರತ ಪ್ರವಾಸ ಕುರಿತು ವಾಷಿಂಗ್ಟನ್ ನಲ್ಲಿ ತಮ್ಮ ಅನುಭವ ಹಂಚಿಕೊಂಡಿರುವ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು, ಭಾರತದ ವೈವಿಧ್ಯತೆಯಲ್ಲಿ ಏಕತೆಯನ್ನು ಕಂಡು ನಾನು ಮತ್ತು ಮಿಶೆಲ್ ಹಿಂದಿರುಗಿದೆವು. ಆದರೆ, ಅದೇ ಭಾರತದಲ್ಲಿ ಕಳೆದ ಕೆಲವು ವರ್ಷಗಳಲ್ಲಿ, ಎಲ್ಲ ವಿಧವಾದ ಧಾರ್ಮಿಕ, ನಂಬಿಕೆಯ ಅಸಹಿಷ್ಣುತೆಯ ಚಟುವಟಿಕೆಗಳು ನಡೆಯುತ್ತಿವೆ. ತಮ್ಮ ನಂಬಿಕೆ, ಪರಂಪರೆಗಳ ಹಿನ್ನೆಲೆಯಲ್ಲೇ ವಿವಿಧ ಗುಂಪುಗಳು ಪರಸ್ಪರ ಅಸಹನೆಯಿಂದ ವರ್ತಿಸುತ್ತಿದ್ದಾರೆ. ನಿಜಕ್ಕೂ ದೇಶದ ವಿಮೋಚನೆಗಾಗಿ ಹೋರಾಡಿದ ಮಹಾತ್ಮಗಾಂಧಿ ಅವರಿಗೆ ಈ ಘಟನೆಗಳು ಶಾಕ್ ನೀಡಿರಬಹುದು ಎಂದು ಒಬಾಮಾ ಹೇಳಿದ್ದಾರೆ.

ಇತಿಹಾಸದುದ್ದಕ್ಕೂ ನಾವು ವಿವಿಧ ಧರ್ಮಗಳವರು ಇನ್ನೊಂದು ಧರ್ಮ ಅಥವಾ ಜಾತಿಯವರ ಮೇಲೆ ಹಿಂಸಾಚಾರ ನಡೆಸಿರುವುದನ್ನು ನಾವು ಕಾಣುತ್ತೇವೆ. ನಮ್ಮ ದೇಶದಲ್ಲೂ ವರ್ಗ-ವರ್ಣ ಕುರಿತ ಘರ್ಷಣೆಗಳು ನಡೆಯುತ್ತಿವೆ. ಇದಕ್ಕೆ ಕಾರಣ ನಮ್ಮಲ್ಲಿ ಅಂಥದ್ದೊಂದು ಪ್ರವೃತ್ತಿ ಅಡಗಿರುವುದು ಎಂದು ಒಬಾಮಾ ಅಭಿಪ್ರಾಯಪಟ್ಟಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ವಿಶೇಷ ಆಹ್ವಾನದ ಮೇರೆಗೆ ಗಣರಾಜ್ಯೋತ್ಸವದಲ್ಲಿ ವಿಶೇಷ ಅತಿಥಿಯಾಗಿ ಭಾರತಕ್ಕೆ ಆಗಮಿಸಿದ್ದ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಇಂದು ಶ್ವೇತಭವನದಲ್ಲಿ ನಡೆದ ಉನ್ನತ ಮಟ್ಟದ ಪ್ರಾರ್ಥನೆ ಮತ್ತು ಉಪಾಹಾರ ಕೂಟದ ವೇಳೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಭಾರತ ಪ್ರವಾಸ ಸಂದರ್ಭ ನವದೆಹಲಿಯಲ್ಲಿ ಭಾಷಣದಲ್ಲಿ ಭಾರತದ ಏಕತೆ, ವೈವಿಧ್ಯತೆ, ಧರ್ಮ ಸಹಿಷ್ಣುತೆಗಳ ಬಗ್ಗೆ ಒಬಾಮ ಮಾತನಾಡಿದ್ದನ್ನು ಶ್ವೇತಭವನ ಅಲ್ಲಗಳೆದ ಬೆನ್ನಲ್ಲೆ ಅಮೆರಿಕ ಅಧ್ಯಕ್ಷರು ಈ ಹೇಳಿಕೆ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com