ಬಜೆಟ್ ನಲ್ಲಿ ವೆಚ್ಚ ನಿಯಂತ್ರಣ ಕ್ರಮ

ಈ ಬಾರಿಯ ಬಜೆಟ್ ತ್ವರಿತ ಆರ್ಥಿಕ ಬೆಳವಣಿಗೆಗೆ ಪೂರಕವಾಗಿರಲಿದೆ. ಅನೇಕ ಸುಧಾರಣಾ ಮತ್ತು ವೆಚ್ಚ-ನಿಯಂತ್ರಣ ಕ್ರಮಗಳು ಬಜೆಟ್ ನಲ್ಲಿ ಸ್ಥಾನ ಪಡೆಯಲಿವೆ...
ಹಣಕಾಸು ಸಚಿವ ಅರುಣ್ ಜೇಟ್ಲಿ (ಸಂಗ್ರಹ ಚಿತ್ರ)
ಹಣಕಾಸು ಸಚಿವ ಅರುಣ್ ಜೇಟ್ಲಿ (ಸಂಗ್ರಹ ಚಿತ್ರ)

ಮುಂಬೈ: ಈ ಬಾರಿಯ ಬಜೆಟ್ ತ್ವರಿತ ಆರ್ಥಿಕ ಬೆಳವಣಿಗೆಗೆ ಪೂರಕವಾಗಿರಲಿದೆ. ಅನೇಕ ಸುಧಾರಣಾ ಮತ್ತು ವೆಚ್ಚ-ನಿಯಂತ್ರಣ ಕ್ರಮಗಳು ಬಜೆಟ್ ನಲ್ಲಿ ಸ್ಥಾನ ಪಡೆಯಲಿವೆ ಎನ್ನುವ ಸುಳಿವನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ ನೀಡಿದ್ದಾರೆ.

ವೆಚ್ಚಕ್ಕೆ ಸಂಬಂಧಿಸಿದ ನಿರ್ಧಾರಗಳಲ್ಲಿ ಇನ್ನಷ್ಟು ಸುಧಾರಣೆ ತರಲಿದ್ದೇವೆ. ಸರ್ಕಾರಸಾಲದ ಹಣದಲ್ಲಿ ನಡೆಯುವುದು ನಮಗೆ ಬೇಕಿಲ್ಲ. ಹಾಗಾಗಿ ಈ ರೀತಿಯ ನಿರ್ಧಾರ ಅನಿವಾರ್ಯ. ಸಾಮರ್ಥ್ಯಕ್ಕಿಂತ ಹೆಚ್ಚು ವೆಚ್ಚ ಮಾಡಿ ಮುಂದಿನ ತಲೆಮಾರಿಗೆ ಸಾಲದ ಹೊರೆ ಬಿಟ್ಟು ಹೋಗುವುದು ಸರಿಯಲ್ಲ. ಮಿತಿ ಮೀರಿ ಖರ್ಚು ಮಾಡುವುದು ಉತ್ತಮ ಹಣಕಾಸು ನೀತಿಯೂ ಅಲ್ಲ ಎಂದು ಜೇಟ್ಲಿ ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ ಜೇಟ್ಲಿ ಅವರು, ಸ್ಥಿರ ತೆರಿಗೆ ವ್ಯವಸ್ಥೆಯನ್ನು ಬಜೆಟ್ ನಲ್ಲಿ ಪರಿಚಯಿಸುವ ಸುಳಿವನ್ನೂ ನೀಡಿದ್ದಾರೆ. ಆದಾಯ ಸಂಗ್ರಹಿಸಲು ರಾಜ್ಯ ಮತ್ತು ದೇಶಗಳು ನ್ಯಾಯ ಸಮ್ಮತವಲ್ಲದ ಮಾರ್ಗ ಅನುಸರಿಸುವಂಥ ಪ್ರಯತ್ನಕ್ಕೆ ಅವಕಾಶ ಇಲ್ಲ. ನಮ್ಮ ತೆರಿಗೆ ವ್ಯವಸ್ಥೆ ಹೂಡಿಕೆದಾರರ ಸ್ನೇಹಿಯಾಗಿಲ್ಲ. ಕಳೆದ ಕೆಲವು ತಿಂಗಳಲ್ಲಿ ನಾವು ತೆರಿಗೆ ವಿವಾದಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಮಹತ್ವದ ಪಾತ್ರವಹಿಸಿದ್ದೇವೆ ಎಂದು ಜೇಟ್ಲಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com