ಸದ್ದಾಂಗೆ ನೇಣು ಹಾಕಿದ್ದ ಹಗ್ಗ ಹರಾಜಿಗೆ: ರು.42 ಕೋಟಿ ನಿರೀಕ್ಷೆ

ಸದ್ದಾಂಗೆ ನೇಣು ಹಾಕಿದ್ದ ಹಗ್ಗ ಹರಾಜಿಗೆ: ರು.42 ಕೋಟಿ ನಿರೀಕ್ಷೆ

ಇರಾಕ್‌ನ ಮಾಜಿ ಅಧ್ಯಕ್ಷ ಸದ್ದಾಂ ಹುಸೇನ್‌ ಅವರನ್ನು ನೇಣುಹಾಕಿದ್ದ ಹಗ್ಗ ಮಾರಾಟಕ್ಕಿದೆ...

ಬಾಗ್ಧಾದ್‌: ಇರಾಕ್‌ನ ಮಾಜಿ ಅಧ್ಯಕ್ಷ ಸದ್ದಾಂ ಹುಸೇನ್‌ ಅವರನ್ನು ನೇಣುಹಾಕಿದ್ದ ಹಗ್ಗ ಮಾರಾಟಕ್ಕಿದೆ.

ಸದ್ದಾಂ ನೇಣುಹಾಕಿದ್ದ ಹಗ್ಗವನ್ನು ಹರಾಜಿಗೆ ಇಡಲಾಗಿದ್ದು, ಬೇಡಿಕೆ ಹೆಚ್ಚಾಗಿದೆ. ಹರಾಜಿನಲ್ಲಿ ಹಗ್ಗಕ್ಕೆ ಬರೋಬ್ಬರಿ ರು. 42 ಕೋಟಿ ಬೆಲೆ ಬರುಬಹುದು ಎನ್ನಲಾಗುತ್ತಿದೆ.

2006ರಲ್ಲಿ ಸದ್ದಾಂರನ್ನು ನೇಣಿಗೇರಿಸಿದ ಹಗ್ಗ ಇದೀಗ, ಇರಾಕ್‌ನ ಮಾಜಿ ಗೃಹ ಸಚಿವ ಡಾ| ಮೊವಾಫಕ್ ಅಲ್‌ ರುಬಾಯ್‌ ಅವರ ಬಳಿ ಇದೆ.

ಈ ಹಗ್ಗವನ್ನು ಕೊಂಡುಕೊಳ್ಳಲು ಕುವೈತ್‌ನ ಇಬ್ಬರು ಉದ್ಯಮಿಗಳು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇಬ್ಬರೊಂದಿಗೂ ಅಲ್‌ ರುಬಾಯ್‌ ಅವರು ಚೌಕಾಸಿ ನಡೆಸಿದ್ದು, ಅಂತಿಮವಾಗಿ, ಹಗ್ಗಕ್ಕೆ 42 ಕೋಟಿ ರೂ. ಬೆಲೆ ಬರಬಹುದು ಎಂದು ನಿರೀಕ್ಷಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Related Stories

No stories found.

Advertisement

X
Kannada Prabha
www.kannadaprabha.com