
ರಾಲೇಗಣ್‌ಸಿದ್ಧಿ: ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಈ ಸೋಲು ಪ್ರಧಾನಿ ನರೇಂದ್ರ ಮೋದಿ ಅವರು ಸೋಲು ಎಂದು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಮಂಗಳವಾರ ಹೇಳಿದ್ದಾರೆ.
ದೆಹಲಿ ವಿಧಾನಸಭೆಯಲ್ಲಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ(ಎಎಪಿ) ಗೆಲವು ಸಾಧಿಸುವುದು ಬಹುತೇಕ ಖಚಿತವಾದ ಹಿನ್ನಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ನಡೆಸಿದ ಅಣ್ಣಾ ಹಜಾರೆ, ಬಿಜೆಪಿ ಸೋಲಿಗೆ ಕಿರಣ್ ಬೇಡಿ ಕಾರಣರಲ್ಲ. ಇದರ ಸೋಲಿಗೆ ಪ್ರಧಾನಿ ಮೋದಿ ಕಾರಣ. ಇದು ಮೋದಿ ಅವರ ಸೋಲಾಗಿದೆ ಎಂದು ತಿಳಿಸಿದ್ದಾರೆ.
ಮೋದಿ ಮೇಲಿನ ಜನರ ವಿಶ್ವಾಸ ಕಡಿಮೆಯಾಗಿದೆ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮೋದಿ ಕೊಟ್ಟ ಭರವಸೆಗಳೆಲ್ಲಾ ಹುಸಿಯಾಗಿವೆ. ಒಳ್ಳೆಯ ದಿನಗಳು ಕೇವಲ ಉದ್ಯೋಗಪತಿಗಳಿಗೆ ಬಂದಿದೆ ಹೊರತು, ಬಡ ಜನರಿಗಲ್ಲ ಎಂದು ಅವರು ವಿಷಾಧಿಸಿದ್ದಾರೆ.
ವಿದೇಶಗಳಲ್ಲಿರುವ ಕಪ್ಪು ಹಣ ವಾಪಸ್ ತರುವಲ್ಲಿ ಬಿಜೆಪಿ ವಿಫಲವಾಗಿದೆ. 100 ದಿನಗಳಲ್ಲಿ ಕಪ್ಪು ಹಣ ತರ್ತುತ್ತೇವೆ ಎಂದು ಭರವಸೆ ನೀಡಿದ್ದ ಮೋದಿ ಸರ್ಕಾರ, ತನ್ನ ಮಾತನ್ನು ಮರೆತಿದೆ. ಭ್ರಷ್ಟಾಚಾರ ಹತ್ತಿಕ್ಕುವ ಪ್ರಯತ್ನದಲ್ಲಿ ಬಿಜೆಪಿ ತೊಡಗಿಲ್ಲ. ಹಾಗಾಗಿ, ಜನತೆಗೆ ಮೋದಿ ಮೇಲೆ ಇದ್ದ ಭರವಸೆ ಕಡಿಮೆಯಾಗಿದೆ ಎಂದು ಹೇಳಿದ್ದಾರೆ.
ಬಿಜೆಪಿ ಜನರ ವಿಶ್ವಾಸವನ್ನು ಮುರಿದ ಹಿನ್ನಲೆಯಲ್ಲಿ ದೆಹಲಿಯಲ್ಲಿ ಜನತೆ ಎಎಪಿಯನ್ನು ಆಯ್ಕೆ ಮಾಡಿದ್ದಾರೆ. ಇದು ಜನತೆಯ ಗೆಲುವು ಎಂದು ಅವರು ತಿಳಿಸಿದ್ದಾರೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
Advertisement