ಸಾಂದರ್ಭಿಕ ಚಿತ್ರ
ದೇಶ
ದೇವಸ್ಥಾನದ ಬಾಗಿಲಿಗೆ 30 ಕೆಜಿ ತೂಕದ ಬೆಳ್ಳಿ ಕವಚ ನೀಡಿದ ಉದ್ಯಮಿ
ದೆಹಲಿ ಮೂಲದ ಉದ್ಯಮಿಯೊಬ್ಬರು ಬಂಕೆ ಬಿಹಾರಿ ದೇವಸ್ಥಾನದ ಬಾಗಿಲಿಗೆ 30 ಕೆಜಿ ತೂಕದ ಬೆಳ್ಳಿ ಕವಚ ನೀಡಿದ್ದಾರೆ...
ಮಥುರಾ: ದೆಹಲಿ ಮೂಲದ ಉದ್ಯಮಿಯೊಬ್ಬರು ಬಂಕೆ ಬಿಹಾರಿ ದೇವಸ್ಥಾನದ ಬಾಗಿಲಿಗೆ 30 ಕೆಜಿ ತೂಕದ ಬೆಳ್ಳಿ ಕವಚ ನೀಡಿದ್ದಾರೆ.
ದೇವಸ್ಥಾನದ ಸಮಿತಿ ಅಧ್ಯಕ್ಷ ನಂದಕಿಶೋರ್ ಉಪಮನ್ಯೂ ಅವರು ಮಾತನಾಡಿ, ಉದ್ಯಮಿಯೊಬ್ಬರು ದೇವಸ್ಥಾನದ ಬಾಗಿಲಿಗೆ 30 ಕೆ.ಜಿ ತೂಕದ ಬೆಳ್ಳಿ ಕವಚವನ್ನು ಉಡುಗೊರೆಯಾಗಿ ನೀಡಿದ್ದಾರೆ. ಆದರೆ ಅವರು, ತಮ್ಮ ಹೆಸರನ್ನು ಬಹಿರಂಗ ಪಡಿಸಲು ಇಚ್ಛಿಸಿಲ್ಲ ಎಂದು ತಿಳಿಸಿದ್ದಾರೆ.
ಈ ದೇವಸ್ಥಾನಕ್ಕೆ ಆ ಉದ್ಯಮಿ ಬರುತ್ತಿದ್ದರು, ಅವರ ಕಾರ್ಯವೊಂದು ಸಫಲವಾಗುವಂತೆ ನೇರವೇರಿಸು ಎಂದು ಹರಕೆ ಕಟ್ಟಿದ್ದರು. ಆ ಕಾರ್ಯ ಸಫಲವಾಗಿದ್ದು, ಬೆಳ್ಳಿ ಕವಚ ನೀಡುವ ಮೂಲಕ ತಮ್ಮ ಹರಕೆ ತೀರಿಸಿದ್ದಾರೆ. ಅಲ್ಲದೇ ಕಾನೂನು ಪ್ರಕಾರ ಅನುಮತಿಯು ಪಡೆದಿದ್ದಾರೆ ಎಂದು ಅವರು ಹೇಳಿದ್ದಾರೆ.


