ಕಪ್ಪು ಹಣ: ನುಡಿದಂತೆ ನಡೆದ ಕೇಂದ್ರ

ಕಪ್ಪು ಹಣದ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ನುಡಿದಂತೆ ನಡೆಯುತ್ತಿದೆ. ವಿದೇಶದಲ್ಲಿ ತೆರಿಗೆ...
ಕಪ್ಪು ಹಣ: ನುಡಿದಂತೆ ನಡೆದ ಕೇಂದ್ರ
Updated on: 

ನವದೆಹಲಿ: ಕಪ್ಪು ಹಣದ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ನುಡಿದಂತೆ ನಡೆಯುತ್ತಿದೆ. ವಿದೇಶದಲ್ಲಿ ತೆರಿಗೆ ತಪ್ಪಿಸಿ ಇಡಲಾಗಿದೆ ಎನ್ನಲಾಗಿರುವ ರು.10 ಸಾವಿರ ಕೋಟಿಯಲ್ಲಿ ರು. 3,500 ಕೋಟಿಯನ್ನು ಈಗಾಗಲೇ ವಾಪಸ್ ತರಲಾಗಿದೆ!

ಎಸ್ಐಟಿ ನೇತೃತ್ವದಲ್ಲಿ ಆದಾಯ ತೆರಿಗೆ ಇಲಾಖೆಯು ಈಗಾಗಲೇ ರು. 3500 ಕೋಟಿ ವಾಪಸ್ ತಂದಿದೆ. ಆದರೆ, ಇವೆಲ್ಲ ಹಳೆಯ ಖಾತೆಗಳು. ಇನ್ನಷ್ಟು ಖಾತೆಗಳ
ಕುರಿತ ಅಂತಿಮ ಪರಿಶೀಲನೆ ಮಾ.31ರೊಳಗೆ ಪರಿಶೀಲನೆ ನಡೆಯಲಿದೆ. ಆ ವೇಳೆಗೆ ಬಾಕಿ ರು. 6500 ಕೋಟಿಗಳನ್ನೂ ವಾಪಸ್ ತರುವ ವಿಶ್ವಾಸ ಇದೆ ಎಂದು ಎಸ್ಐಟಿ ಉಪ ಮುಖ್ಯಸ್ಥ ನ್ಯಾ.ಅರಿಜಿತ್ ಪಸಾಯತ್ ಹೇಳಿದ್ದಾರೆ.

ಈಗ ವಾಪಸ್ ತಂದಿರುವುದು ಕಪ್ಪುಹಣದ ಒಂದು ಭಾಗವಷ್ಟೆ. ಹಾಗಾಗಿ ನಾವು ಎಲ್ಲ ಮೂಲಗಳಿಂದ ವಿದೇಶದಲ್ಲಿರುವ ಕಪ್ಪುಹಣದ ಕುರಿತು ಮಾಹಿತಿ ಕೇಳುತ್ತಿದ್ದೇವೆ. ಸ್ವಿಜರ್ಲೆಂಡ್ ನಲ್ಲಿರುವ ಭಾರತೀಯರ ಒಟ್ಟು 628 ಖಾತೆಗಳ ಕುರಿತು ಫ್ರಾನ್ಸ್ ಮಾಹಿತಿ ನೀಡಿದೆ. ಇದರಲ್ಲಿ ಅರ್ಧದಷ್ಟು ಎನ್ಆರ್ ಐಗಳದು. ಇವುಗಳಲ್ಲಿ ಕಾನೂನು ರೀತಿಯಲ್ಲೇ ಹಣ ಇಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com