40 ವರ್ಷಗಳಿಂದ ಪ್ರತಿದಿನ ಪತ್ನಿಗೆ ಪ್ರೇಮಪತ್ರ ಬರೆದ ಪತಿ

ತಂತ್ರಜ್ಞಾನದ ಬಳಕೆ ಹೆಚ್ಚಾಗುತ್ತಿದ್ದಂತೆ ಪ್ರೇಮ ಪತ್ರ ಬರೆಯುವುದು ಕಡಿಮೆಯಾಗಿರುವುದಂತೂ ನಿಜ. ಮದುವೆಗೂ ಮುನ್ನ ಪ್ರೇಮ ಪತ್ರ ಬರೆಯುವ ಪ್ರೇಮಿಗಳು...
ಬಿಲ್ ಬ್ರೆಸ್ನಾನ್ ಮತ್ತು ಕರ್ಸ್ಟನ್
ಬಿಲ್ ಬ್ರೆಸ್ನಾನ್ ಮತ್ತು ಕರ್ಸ್ಟನ್
Updated on

ತಂತ್ರಜ್ಞಾನದ ಬಳಕೆ ಹೆಚ್ಚಾಗುತ್ತಿದ್ದಂತೆ ಪ್ರೇಮ ಪತ್ರ ಬರೆಯುವುದು ಕಡಿಮೆಯಾಗಿರುವುದಂತೂ ನಿಜ. ಮದುವೆಗೂ ಮುನ್ನ ಪ್ರೇಮ ಪತ್ರ ಬರೆಯುವ ಪ್ರೇಮಿಗಳು ಮದುವೆಯಾದ ನಂತರ ಬರೆಯೋದನ್ನು ಬಿಟ್ಟು ಬಿಡುತ್ತಾರೆ. ಆದರೆ ಇಲ್ಲೊಬ್ಬ ಪತಿರಾಯ ತನ್ನ ಪತ್ನಿಗೆ ಸತತ 40 ವರ್ಷಗಳಿಂದ ಪ್ರತಿದಿನ ಪ್ರೇಮ ಪತ್ರ ಬರೆಯುತ್ತಿದ್ದಾರೆ.

ನ್ಯೂಜರ್ಸಿಯ ನಿವಾಸಿ ಬಿಲ್ ಬ್ರೆಸ್ನಾನ್(74) ತನ್ನ ಪತ್ನಿ ಕರ್ಸ್ಟನ್ (74 ) ಗೆ ಪ್ರತಿದಿನ ಪ್ರೇಮಪತ್ರ ಬರೆಯುತ್ತಿದ್ದಾರೆ.

25 ಬಾಕ್ಸ್ ನಲ್ಲಿ 10 ಸಾವಿರಕ್ಕೂ ಹೆಚ್ಚು ಪ್ರೇಮ ಪತ್ರವನ್ನು ಮನೆಯಲ್ಲಿ ಇಡಲಾಗಿದೆ. ಪ್ರತಿದಿನ ಪತ್ನಿಗೆ ಪ್ರೇಮ ಪತ್ರ ಬರೆಯುವ ಬಿಲ್ ಬ್ರೆಸ್ನಾನ್, ವರ್ಷ, ತಾರೀಕು, ದಿನವನ್ನು ನಮೂದಿಸುತ್ತಾರೆ. ಇದರಲ್ಲಿ ಬಿಲ್ ಸಹಿ ಇರುವುದಲ್ಲದೇ ಪ್ರತಿಯೊಂದು ಪತ್ರದಲ್ಲೂ ಲವ್ ಯು ಡಾರ್ಲಿಂಗ್ ಎಂದು ಕೊನೆಯಲ್ಲಿ ಬರೆಯುತ್ತಾರೆ.

1974 ರಲ್ಲಿ ಒಂದೇ ತರಗತಿಯಲ್ಲಿ ಓದುತ್ತಿದ್ದ ಇಬ್ಬರೂ ಪ್ರೇಮ ಪಾಶಕ್ಕೆ ಬಿದ್ದರಂತೆ. ರೈಲಿನಲ್ಲಿ ಸಂಚರಿಸುತ್ತಿದ್ದ ಅವರು, ಅಲ್ಲಿ ಸಿಗುವ ಕಾಗದ, ಕರವಸ್ತ್ರವನ್ನು ಪ್ರೇಮ ಪತ್ರಕ್ಕೆ ಬಳಸುತ್ತಿದ್ದರಂತೆ.

ಇದು ನನ್ನ ಪ್ರೇಮವನ್ನು ವ್ಯಕ್ತಪಡಿಸು ಪರಿ. ಇತ್ತೀಚೆನ ದಿನಗಳಲ್ಲಿ ಮೊಬೈಲ್, ಇಂಟರ್ನೆಟ್ ಸೇರಿದಂತೆ ಕರೆ ಮಾಡಿ ಮಾತಾಡುವುದರಲ್ಲೇ ಕಾಲ ಕಳೆದು, ಒಬ್ಬರೊಬ್ಬರನ್ನು ಅರ್ಥಮಾಡಿಕೊಳ್ಳುವುದು ಕಡಿಮೆಯಾಗಿದೆ. ಹೀಗಾಗಿ ಪ್ರೇಮ ವೈಪಲ್ಯ ಹೆಚ್ಚು. ನಮ್ಮ ಈ ಪ್ರೇಮ ಪತ್ರದ ಪರಿ ಈಗಿನ ಯುವಜನತೆ ಒಳ್ಳೆ ಸಂದೇಶ ನೀಡಿದರೆ ಸಾಕು. ಅವರು ತಮ್ಮ ಪ್ರೀತಿಯಲ್ಲಿ ಯಶಸ್ಸು ಕಾಣುತ್ತಾರೆ ಎಂದು ಬಿಲ್ ಬ್ರೆಸ್ನಾನ್ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com