ಮಿಗ್ ಯುದ್ಧ ವಿಮಾನ 7 ವರ್ಷದೊಳಗೆ ನಿವೃತ್ತಿ

ಮಿಗ್ ಯುದ್ಧ ವಿಮಾನ (ಸಂಗ್ರಹ ಚಿತ್ರ)
ಮಿಗ್ ಯುದ್ಧ ವಿಮಾನ (ಸಂಗ್ರಹ ಚಿತ್ರ)

ಬೆಂಗಳೂರು: ಮಿಗ್ ಸರಣಿ ಯುದ್ಧ ವಿಮಾನಗಳಿಗೆ ಮುಂದಿನ 7 ವರ್ಷಗಳೊಳಗೆ ನಿವೃತ್ತಿ ನೀಡಲಾಗುವುದು ಎಂದು ಏರ್ ಚೀಪ್ ಮಾರ್ಷಲ್ ಅರುಪ್ ರಾಹಾ ತಿಳಿಸಿದ್ದಾರೆ.

ಮಿಗ್-21 ಮತ್ತು 27ಗಳಲ್ಲಿ ಆಗಾಗ ಅಪಘಾತ ಆಗುತ್ತಿರುವುದು ತಿಳಿದಿದೆ. ಇದಕ್ಕೆ ಪರ್ಯಾಯ ಹುಡುಕಲೇಬೇಕಿದೆ. ಇದರರ್ಥ ಮಿಗ್ ಸರಣಿ ಯುದ್ಧ ವಿಮಾನಗಳು ಅಸಮರ್ಥ ಎಂದಲ್ಲ. ಈ ಹಿನ್ನೆಲೆಯಲ್ಲಿ ಮಿಗ್-21ನ್ನು 5 ವರ್ಷ ಹಾಗೂ ಮಿಗ್- 27ನ್ನು 7 ವರ್ಷದೊಳಗೆ ವಾಯುಸೇನೆಯಿಂದ ವಿಮುಕ್ತ ಮಾಡಲು ನಿರ್ಧರಿಸಲಾಗಿದೆ.

ಮುಂದಿನ 30 ವರ್ಷಕ್ಕೆ ನೆರವಾಗಬಲ್ಲ ಯುದ್ಧ ವಿಮಾನಗಳ ತಂತ್ರಜ್ಞಾನ ನೋಡಬೇಕಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾರ್ಯಮಗ್ನವಾಗಿದೆ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ರಾಹಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com