ಅರುಣಾಚಲ ಪ್ರದೇಶಕ್ಕೆ ಮೋದಿ ಭೇಟಿ: ಚೀನಾದಿಂದ ಪ್ರತಿಭಟನೆ ಎಚ್ಚರಿಕೆ

ಅರುಣಾಚಲ ಪ್ರದೇಶ ಮೋದಿ ಭೇಟಿ ಕುರಿತಂತೆ ತೀವ್ರ ವಿರೋಧ ವ್ಯಕ್ತ ಪಡಿಸಿರುವ ಚೀನಾ ಪ್ರತಿಭಟನೆ ನಡೆಸುವುದಾಗಿ ಶುಕ್ರವಾರ ಹೇಳಿದೆ...
ಪ್ರಧಾನ ಮಂತ್ರಿ ನರೇಂದ್ರ ಮೋದಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ
Updated on

(ತನಗರ್)ಬೀಜಿಂಗ್: ಅರುಣಾಚಲ ಪ್ರದೇಶ ಮೋದಿ ಭೇಟಿ ಕುರಿತಂತೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಚೀನಾ ಪ್ರತಿಭಟನೆ ನಡೆಸುವುದಾಗಿ ಶುಕ್ರವಾರ ಹೇಳಿದೆ.

ಈ ಕುರಿತಂತೆ ಪ್ರತಿಕ್ರಿಯಿಸಿರುವ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಹುಆ ಚುನ್ಯಿಂಗ್ ಅವರು, ಅರುಣಾಚಲ ಪ್ರದೇಶದ ಗಡಿ ವಿವಾದ ಈ ವರೆಗೂ ಇತ್ಯರ್ಥವಾಗಿಲ್ಲ. ಎರಡು ದೇಶಗಳ ನಡುವೆ ದ್ವಿಪಕ್ಷೀಯ ಸಂಬಂಧ ಸರಿಯಿರಬೇಕು ಎಂದಿದ್ದರೆ, ವಿವಾದ ಇತ್ಯರ್ಥವಾಗುವವರೆಗೂ ಗಡಿಯಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದನ್ನು ಅಧಿಕಾರಿಗಳು ನಿಯಂತ್ರಿಸಬೇಕು ಎಂದು ಹೇಳಿದ್ದಾರೆ.

ಭಾರತ ಮತ್ತು ಚೀನಾ ನಡುವಣ ಇರುವ ಗಡಿ ವಿವಾದ ವಿಷಯ ಎಲ್ಲರಿಗೂ ಅರಿವಿರುವಂತಹದ್ದು, ಅರುಣಾಚಲ ಪ್ರದೇಶದಲ್ಲಿನ ಭಾರತ ಅಧಿಕಾರಿಗಳ ನಡವಳಿಕೆಗಳನ್ನು ನಾವು ವಿರೋಧಿಸುತ್ತೇವೆ. ಆದ್ದರಿಂದ ಅರುಣಾಚಲ ಪ್ರದೇಶ ವಿವಾದ ಕುರಿತಂತೆ ಭಾರತೀಯರು ಬಹಳ ಎಚ್ಚರಿಕೆ ನಡೆಯನ್ನು ಇಡಬೇಕು ಎಂದು ಎಚ್ಚರಿಕೆ ನೀಡಿದೆ.

ಅರುಣಾಚಲ ಪ್ರದೇಶದ ನಹಾರ್ ಲಗುನ್ ನಿಂದ ನವದೆಹಲಿಗೆ ತೆರಳುವ ಮೊದಲ ರೈಲಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನಿನ್ನೆ ಚಾಲನೆ ನೀಡಿದ್ದರು.

ಏನಿದು ವಿವಾದ?...


ಅರುಣಾಚಲ ಪ್ರದೇಶ ಗಡಿ ವಿವಾದ ಅರ್ಥಾತ್ ಚೀನಾ-ಭಾರತ ಗಡಿ ವಿವಾದಕ್ಕೆ ಶತಮಾನದ ಇತಿಹಾಸವಿದೆ. ಬ್ರಿಟೀಷರ ಆಳ್ವಿಕೆ ಕಾಲದಿಂದಲೇ ಇದನ್ನು ತಿಳಿಗೊಳಿಸಲು ಪ್ರಯತ್ನಗಳು ನಡೆದಿವೆ ಮತ್ತು ಎಲ್ಲ ಪ್ರಯತ್ನಗಳೂ ವಿಫಲಗೊಂಡಿವೆ. 1912ರಲ್ಲಿ ಚೀನಾ ಗಣರಾಜ್ಯ ಸ್ಥಾಪನೆಯಾದ ಬಳಿಕ ಚೀನಾದ ಸೈನ್ಯವನ್ನೇ ಹಿಮ್ಮೆಟ್ಟಿಸಿ ಟಿಬೆಟ್ ಸ್ವಾತಂತ್ರ್ಯ ಘೋಷಿಸಿಕೊಂಡಿತು. ಈ ಘರ್ಷಣೆ ಭಾರತದ ಗಡಿ ಒಳಕ್ಕೂ ನುಸುಳುವ ಸೂಚನೆ ದೊರೆತಾಗ ಚೀನಾ ಮತ್ತು ಟಿಬೆಟ್ ಎರಡನ್ನೂ ಕೂರಿಸಿಕೊಂಡು ತ್ರಿಪಕ್ಷೀಯ ಒಪ್ಪಂದಕ್ಕೆ ಮುಂದಾಯಿತು ಭಾರತ. ಮೊದಲು 1916ರ ಒಪ್ಪಂದಕ್ಕೆ ಸಮ್ಮತಿಸಿದ ಚೀನಾ ಮುಂದೆ ಅದರಿಂದ ಹಿಂದೆ ಸರಿಯಿತು.

ಅರಣಾಚಲ ಪ್ರದೇಶ ಮತ್ತು ಟಿಬೆಟ್ ನಡುವೆ ಮ್ಯಾಕ್ ಮೋಹನ್ ಗಡಿ ರೇಖೆ ಗುರುತಿಸಲಾಯಿತು. ಟಿಬೆಟ್ ಮತ್ತು ಬ್ರಿಟೀಷ್ ಇಂಡಿಯಾ ಇದಕ್ಕೆ ಸಹಿ ಹಾಕಿದರೂ ಚೀನಾ ಇದನ್ನು ತಿರಸ್ಕರಿಸಿತು. ಅರುಣಾಚಲ ಪೂರ್ತಿ ತನ್ನದೇ ಎನ್ನುವುದು ಅದರ ವಾದ, ಆದರೆ ಅದರ ಕಣ್ಣೆಲ್ಲಾ ಇರುವುದು ಗಡಿಯಲ್ಲಿರುವ ತವಾಂಗ್ ಜಿಲ್ಲೆಯ ಮೇಲೆ. ಈ ಗಡಿ ರೇಖೆ ಒಪ್ಪಿಕೊಂಡರೆ ತನ್ನ ವಾದ ಕೊನೆಗೊಳ್ಳಲಿದೆ ಎನ್ನುವುದು ಅದರ ನಿಲುವು. 1969ರ ಸಮರದಲ್ಲಿ ಅರುಣಾಚಲ ಪ್ರದೇಶವನ್ನು ಆಕ್ರಮಿಸಿದ್ದ ಚೀನಾ ನಂತರ ತಾನಾಗಿ ಮ್ಯಾಕ್‌ಮೋಹನ್ ಗಡಿಯಾಚೆಗೆ ಹೋಯಿತು. ಆದರೆ, ಈ ಪ್ರದೇಶ ತನ್ನದು ಎನ್ನುವ ಪಟ್ಟನ್ನು ಮಾತ್ರ ಅದು ಸಡಿಸಲಿಲ್ಲ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com