
ಮುಂಬೈ: 5 ದಿನಗಳ ಹಿಂದೆ ಕೊಲ್ಹಾಪುರದಲ್ಲಿ ದುಷ್ಕರ್ಮಿಗಳ ಗುಂಡಿನ ದಾಳಿಗೆ ಒಳಗಾಗಿದ್ದ ಸಿಪಿಐ ನಾಯಕ, ಟೋಲ್ ವಿರೋಧಿ ಹೋರಾಟಗಾರ ಗೋವಿಂದ ಪನ್ಸಾರೆ ಶುಕ್ರವಾರ ರಾತ್ರಿ ಅಸುನೀಗಿದ್ದಾರೆ.
ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದರು. ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಳರ ಪತ್ನಿ ಚೇತರಿಸಿಕೊಳ್ಳುತ್ತಿದ್ದಾರೆ.
ಫೆ.16ರಂದು ಬೆಳಗ್ಗೆ ಪನ್ಸಾರೆ ಮತ್ತು ಅವರ ಪತ್ನಿ ನಡೆದಾಡುತ್ತಿದ್ದಾಗ ಅವರ ಮೇಲೆ ಗುಂಡಿನ ದಾಳಿ ನಡೆದಿತ್ತು. ರಸ್ತೆ ಟೋಲ್ ಸಂಗ್ರಹದ ವಿರುದ್ಧದ ಹೋರಾಟದಲ್ಲಿ ಪನ್ಸಾರೆ ಪ್ರಮುಖ ಪಾತ್ರ ವಹಿಸಿದ್ದರು.
Advertisement