
ಸೇಲಂ: ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಎಂಬ ಗಾದೆ ಇಲ್ಲಿ ಸತ್ಯವಾಗಿದೆ.
ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಗಂಡ ಹೆಂಡತಿ ಮಧ್ಯೆ ಉಂಟಾದ ಜಗಳ 5 ವರ್ಷದ ಮಗನಿಗೆ ಚಾಕುವಿನಿಂದ ಇರಿಯುವ ಮೂಲಕ ಅಂತ್ಯವಾಗಿದೆ. ಹೆಂಡತಿಯೊಂದಿಗೆ ಜಗಳವಾಡಿ ತನ್ನ ಐದು ವರ್ಷದ ಮಗುವಿಗೆ ಚಾಕುವಿನಿಂದ ಇರಿದು ತಂದೆ ಪರಾರಿಯಾಗಿರುವ ಘಟನೆ ಅಟ್ಟೂರ್ನಲ್ಲಿರುವ ತುಲುಕನೂರ್ನ ಭಾರತಿ ನಗರದಲ್ಲಿ ನಡೆದಿದೆ.
44 ವರ್ಷದ ಮುರುಗನ್ ಎಂಬಾತ ವಿಧವೆಯಾಗಿದ್ದ ಜೀವಾ(32) ಎಂಬುವವಳನ್ನು ಮದುವೆಯಾಗಿದ್ದನು. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಜೀವಾಳೊಂದಿಗೆ ಪ್ರತಿದಿನ ಜಗಳವಾಡುತ್ತಿದ್ದ ಮುರುಗನ್ ಹೆಂಡತಿ ಮಗನನ್ನು ಕೆಲವು ವರ್ಷಗಳ ಕಾಲ ಬಿಟ್ಟು ಹೋಗಿದ್ದನು. ಮತ್ತೆ ಜೀವಾ ವಾಸಗಿದ್ದ ಮನೆಗೆ ಬಂದ ಮುರುಗನ್ ಜಗಳವಾಡಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿ, ತನ್ನ ಮಗ ಮೂವಿನ್(5)ಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ.
ತಕ್ಷಣ ಜೀವಾ ಮಗುವನ್ನು ಆಸ್ಪತ್ರೆಗೆ ಕರೆದೊಯ್ತು ಚಿಕಿತ್ಸೆ ಕೊಡಿಸಿದ್ದಾಳೆ. ಚಿಕಿತ್ಸೆ ಪಡೆಯುತ್ತಿರುವ ಮಗು ಚೇತರಿಸಿಕೊಳ್ಳುತ್ತಿದೆ ಎಂದು ಮೂಲಗಳು ತಿಳಿಸಿವೆ.
ಜೀವಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಮುರುಗನ್ ವಿರುದ್ಧ ಕೊಲೆ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಪತ್ತೆಗಾಗಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement