ಬಿಳಿ ಕೋಬ್ರಾ
ಬಿಳಿ ಕೋಬ್ರಾ

ಅಮೆರಿಕದ ಬಿಳಿ ಕೋಬ್ರಾಗೆ ಭಾರತೀಯ ಹೆಸರು

ಸ್ಯಾನ್ ಡಿಗೊ ಮೃಗಾಲಯದಲ್ಲಿ ಇದೀಗ..

ಸ್ಯಾನ್ ಡಿಗೊ: ಸ್ಯಾನ್ ಡಿಗೊ ಮೃಗಾಲಯದಲ್ಲಿ ಇದೀಗ ಹೊಸ ಅತಿಥಿಯ ಆಗಮನವಾಗಿದ್ದು, ಎಲ್ಲರ ಚಿತ್ತ ಆಕೆಯತ್ತ ಆಕರ್ಷಿತವಾಗಿದೆ. ಈಕೆಯನ್ನು ಕಾಣಲು ಸಾವಿರಾರು ಮಂದಿ ಮೃಗಾಲಯದತ್ತೆ ದಾವಿಸುತ್ತಿದ್ದಾರೆ.

ವಿಶ್ವದಲ್ಲೇ ಭಾರಿ ಅಪರೂಪ ಪ್ರಬೇಧವಾಗಿರುವ ಬಿಳಿ ಕೋಬ್ರಾ ಇದೀಗ ಸ್ಯಾನ್‌ಡಿಗೋ ಮೃಗಾಲಯದ ಆಕರ್ಷಣೆಯಾಗಿದೆ. ಈ ಬಿಳಿ ಕೋಬ್ರಾಗೆ ಭಾರತೀಯ ಹೆಸರನ್ನು ನಾಮಕರಣ ಮಾಡಿರುವುದು ಮತ್ತೊಂದು ವಿಶೇಷವಾಗಿದೆ.

ಅಧಿರ ಎಂದು ಬಿಳಿ ಕೋಬ್ರಾಗೆ ಹೆಸರಿಡಲಾಗಿದೆ. ಅಧಿರ ಎಂದರೆ ಹಿಂದಿಯಲ್ಲಿ ಬೆಳಕು ಎಂದರ್ಥ.

ಸ್ಯಾನ್‌ಡಿಗೋ ಮೃಗಾಲಯವೂ, ಬಿಳಿ ಕೋಬ್ರಾಗೆ ಹೆಸರನ್ನು ಆಯ್ಕೆ ಮಾಡಲು ಇಂಟರ್ನೆಟ್ ಮೂಲಕ ಮತದಾರರಿಗೆ ಮನವಿ ಮಾಡಿತ್ತು. ಹೆಸರುಗಳ ಪಟ್ಟಿಯಲ್ಲಿ ಒಂದನ್ನು ಆಯ್ಕೆ ಮಾಡುವಂತೆ ಸೂಚಿಸಿತ್ತು.

ಈ ಪೈಕಿ ಸುಮಾರು 4ಸಾವಿರಕ್ಕೂ ಅಧಿಕ ಮಂದಿ ಅಧಿರ ಎಂಬ ಹೆಸರನ್ನು ಶಿಫಾರಸು ಮಾಡಿದ್ದು. ಈ ಹೆಸರನ್ನು ಮೃಗಾಲಯ ಆಯ್ಕೆ ಮಾಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com