ಈ ಊರಲ್ಲಿ ಮನೆಗು ಇಲ್ಲ, ಬ್ಯಾಂಕಿಗೂ ಇಲ್ಲ ಬಾಗಿಲು!

ಬ್ಯಾಂಕ್‌ಗೂ ಸಹಾ ಬಾಗಿಲು ಇಲ್ಲದಿರವುದು ಅಚ್ಚರಿಗೆ ಕಾರಣವಾಗಿದೆ...
ಬಾಗಿಲುಗಳಿಲ್ಲದ ಊರು
ಬಾಗಿಲುಗಳಿಲ್ಲದ ಊರು
Updated on

ಶನಿ ಶಿಂಗ್ನಾಪುರ: ಈ ಗ್ರಾಮದಲ್ಲಿನ ಮನಗೆಳಿಗೆ ಹೊಸ್ತುಲುಗಳಿದ್ದರು, ಬಾಗಿಲುಗಳೇ ಇಲ್ಲ. ಮನೆಯಲ್ಲಿ ಲಕ್ಷಾಂತರ ರೂಪಾಯಿ ಇಟ್ಟಿದ್ದರೂ ಸಹಾ ಇಲ್ಲಿಯವರೆಗೆ ಯಾವುದೇ ದರೋಡೆ ಪ್ರಕರಣಗಳು ನಡೆದಿಲ್ಲ ಎಂಬುದು ಗ್ರಾಮಸ್ಥರ ವಾದ.

ಇನ್ನೂ ಈ ಗ್ರಾಮದಲ್ಲಿರುವ ಬ್ಯಾಂಕ್‌ಗೂ ಸಹಾ ಬಾಗಿಲು ಇಲ್ಲದಿರವುದು ಅಚ್ಚರಿಗೆ ಕಾರಣವಾಗಿದೆ.

ಮಹಾರಾಷ್ಟ್ರದ ಶನಿ ಶಿಂಗ್ನಾಪುರ ಇಂತಹ ಅಚ್ಚರಿಗೆ ಸಾಕ್ಷ್ಯಿಯಾಗಿರುವ ಗ್ರಾಮ. ಶನಿ ಮಹಾತ್ಮ ನೆಲೆಗೊಂಡಿರುವ ಈ ಗ್ರಾಮದಲ್ಲಿ, ಆತ ಗ್ರಾಮಸ್ಥರ ವಿಶೇಷ ರಕ್ಷಣೆ ಮಾಡುತ್ತಾನೆ ಎಂಬುದು ಈ ಗ್ರಾಮಸ್ಥರ ನಂಬಿಕೆ.

ತಲತಲಾಂತರಗಳಿಂದಲೂ ಈ ಗ್ರಾಮದಲ್ಲಿನ ಮನೆಗಳಿಗೆ ಬಾಗಿಲುಗಳಿಲ್ಲದಿರುವುದನ್ನು ಕಾಣಬಹುದು. ಇದು ಒಂದು ಸಂಪ್ರದಾಯವಾಗಿಯೇ ಬೆಳೆದುಬಂದಿದೆ.

ಕೆಲ ವರ್ಷಗಳ ಹಿಂದೆ ಶನಿ ದೇವರು ನನ್ನ ಕನಸ್ಸಿನಲ್ಲಿ ಬಂದು, ನೀನು ನಿನ್ನ ಮನಗೆ ಬಾಗಿಲು ಹಾಕುವ ಅಗತ್ಯವಿಲ್ಲ. ನೀನು ನಿರ್ಭೀತಿಯಿಂದ ಇರು. ನಾನು ನಿಮ್ಮನ್ನೆಲ್ಲ ರಕ್ಷಿಸುತ್ತೇನೆ ಎಂದು ಹೇಳಿದರು. ಅಂದಿನಿಂದ ಈ ಗ್ರಾಮದಲ್ಲಿ ಯಾವ ಮನೆಗಳಿಗೂ ಬಾಗಿಲುಗಳಿಲ್ಲದಿರುವುದನ್ನು ನೀವು ಕಾಣಬಹುದು. ಎಂದು ಗ್ರಾಮದ ಮಹಿಳೆಯೊಬ್ಬಳು ತಿಳಿಸಿದಳು.

300 ವರ್ಷಗಳ ಹಿಂದೆ ಈ ಗ್ರಾಮದಲ್ಲಿ ಭೀಕರ ಪ್ರವಾಸವೊಂದು ಎದುರಾಗಿತ್ತು. ಆ ವೇಳೆ ನದಿ ಪಾತ್ರದಲ್ಲಿ ಒಂದು ಚಪ್ಪಡಿ ಕಲ್ಲು ಇದ್ದು, ಆ ಕಲ್ಲು ಗ್ರಾಮದೊಳಗೆ ಪ್ರವಾಹ ಬಾರದಂತೆ ನೀರನ್ನು ತಡೆದಿತ್ತು. ಮಾರನೇ ದಿನ ಆ ಚಪ್ಪಡಿ ಕಲ್ಲು ಶನಿಮಹಾತ್ಮನ ಆಕಾಶ ಪಡೆದುಕೊಂಡಿತ್ತು. ಅಂದಿನಿಂದ ಇಲ್ಲಿಯವರೆಗೆ ನಾವು ಅದನ್ನು ಶನಿದೇವರೆಂದು ನಂಬಿದ್ದು, ನಿತ್ಯ ಪೂಜೆ ಪುನಸ್ಕಾರಗಳನ್ನು ನೆರವೇರಿಸುತ್ತಿರುವುದಾಗಿ ಗ್ರಾಮದ ಹಿರಿಯ ಮಹಿಳೆ ವಿವರಿಸಿದ್ದಾರೆ.

ಇಲ್ಲಿಯವರೆಗೆ ಈ ಗ್ರಾಮದಲ್ಲಿ ಯಾವುದೇ ದರೋಡೆ, ಲೂಟಿ, ಕಳವು ಪ್ರಕರಣಗಳು ನಡೆದಿಲ್ಲ. ಅಂತಹವರು ಯಾರಾದರೂ ಗ್ರಾಮದೊಳಗೆ ಬಂದರೆ, ಶನಿ ದೇವರು ದರೋಡೆಕೋರರನ್ನು ಸುಮ್ಮನೆ ಬಿಡುವುದಿಲ್ಲ ಎಂದು ತಿಳಿಸಿದರು.

ಇನ್ನೂ ಈ ಗ್ರಾಮದಲ್ಲಿರುವ ಯೂಕೊ ಬ್ಯಾಂಕ್‌ಗೂ ಸಹಾ ಬಾಗಿಲು ಇಲ್ಲದಿರುವುದು ಎಲ್ಲರನ್ನು ನಿಬ್ಬೆರಗಾಗಿಸುವಂತೆ ಮಾಡಿದೆ. ಈ ಕುರಿತು ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಬ್ಯಾಂಕ್‌ನ ಹಿರಿಯ ಅಧಿಕಾರಿ, ಹಲವು ವರ್ಷಗಳಿಂದ ನಾವು ಬ್ಯಾಂಕ್‌ಗೆ ಬಾಗಿಲು ಹಾಕಿಲ್ಲ. ಅದರಂತೆ ಇಲ್ಲಿಯವರೆಗೆ ಯಾವುದೇ ಕಳ್ಳತನ ಪ್ರಕರಣಗಳು ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com